ಮಂಗಳವಾರ, ನವೆಂಬರ್ 19, 2019
26 °C

ಮುಂಬೈಗೆ ಅಮೋಘ ಜಯ

Published:
Updated:

ಚೆನ್ನೈ (ಪಿಟಿಐ): 19ನೇ ಓವರ್‌ನ ಮೊದಲ ಎಸೆತದಲ್ಲಿ ಮಹೇಂದ್ರ ಸಿಂಗ್ ಹೊಡೆತದ ಚೆಂಡನ್ನು ಕೀರನ್ ಪೊಲಾರ್ಡ್ ಹಿಡಿದ ಅಮೋಘ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿತು. ಈ ಪರಿಣಾಮ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಎದುರು 9 ರನ್‌ಗಳ ರೋಚಕ ಗೆಲುವು ಸಾಧಿಸಿತು.ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಿಕಿ ಪಾಂಟಿಂಗ್ ಬಳಗ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 148 ರನ್ ಪೇರಿಸಿತು. ಚೆನ್ನೈ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 139 ರನ್ ಮಾತ್ರ ಗಳಿಸಿತು. ಸೂಪರ್ ಕಿಂಗ್ಸ್ ತಂಡಕ್ಕೆ ಕೊನೆಯ ಓವರ್‌ನಲ್ಲಿ 12 ರನ್ ಅಗತ್ಯವಿತ್ತು. ಆದರೆ, ಈ ಮೊತ್ತವನ್ನು ಗಳಿಸಲು ಇಂಡಿಯನ್ಸ್ ತಂಡದ ಮುನಾಫ್ ಪಟೇಲ್ ಅವಕಾಶ ನೀಡಲಿಲ್ಲ.

ಪ್ರತಿಕ್ರಿಯಿಸಿ (+)