ಸೋಮವಾರ, ಜೂನ್ 21, 2021
26 °C

ಮುಂಬೈನಲ್ಲಿ ‘ಎಎಪಿ’ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮಹಾರಾಷ್ಟ್ರದಲ್ಲಿ ಬುಧವಾರದಿಂದ ಎರಡು ದಿನಗಳ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು ಕೇಜ್ರಿವಾಲ್ ಅವರನ್ನು ಬರಮಾಡಿಕೊಂಡರು. ಮಾಧ್ಯಮ ಪ್ರತಿನಿಧಿಗಳು, ಪೊಲೀಸರ ಸ್ಥಳದಲ್ಲಿದ್ದರು. ಆದರೆ ಇದನ್ನು ಪರಿಗಣಿಸದ ಕೇಜ್ರಿವಾಲ್ ಇಬ್ಬರು ಹಿರಿಯ ಮುಖಂಡರ ಜತೆಗೂಡಿ ಆಟೋ ರಿಕ್ಷಾ ಏರಿ ಅಂಧೇರಿ ರೈಲ್ವೆ ನಿಲ್ದಾಣದೆಡೆಗೆ ಪ್ರಯಾಣ ಬೆಳೆಸಿದರು.

ಇದರಿಂದಾಗಿ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಕೇಜ್ರಿವಾಲ್ ಇದ್ದ ಆಟೋ ರಿಕ್ಷಾ ಬೆನ್ನುಹತ್ತುವಂತಾಯಿತು.ಬಳಿಕ ಅಂಧೇರಿ ರೈಲ್ವೆ ನಿಲ್ದಾಣದಲ್ಲಿ ಸದಾ ಜನರಿಂದ ತುಂಬಿ ತುಳುಕುವ ಸಬರ್ಬನ್ ರೈಲಿನಲ್ಲಿ ಎರಡನೇ ದರ್ಜೆಯ ಬೋಗಿಯಲ್ಲ ಕುಳಿತು ಚರ್ಚ್ ಗೇಟ್ ವರೆಗೆ ಪ್ರಯಾಣಿಸಿದರು.ಜನರ ಮಧ್ಯೆ ಕೇಜ್ರಿವಾಲ್ ಪ್ರಯಾಣ ನಡೆಸಿದ್ದರಿಂದ ಭದ್ರತೆ ಒದಗಿಸಲು ಪೊಲೀಸರು ಸಾಕಷ್ಟು ಕಷ್ಟಪಡಬೇಕಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.