ಬುಧವಾರ, ಫೆಬ್ರವರಿ 24, 2021
23 °C
ಶಾರುಖ್‌ ಪ್ರವೇಶಕ್ಕೆ ಅನುಮತಿ

ಮುಂಬೈನಲ್ಲೇ ಫೈನಲ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈನಲ್ಲೇ ಫೈನಲ್‌?

ಮುಂಬೈ (ಪಿಟಿಐ): ಐಪಿಎಲ್‌ ಏಳನೇ ಆವೃತ್ತಿಯ ಫೈನಲ್‌ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿಯೇ ನಡೆಯುವುದು ಬಹುತೇಕ ಖಚಿತ ವಾಗಿದೆ. ಬಾಲಿವುಡ್‌ ನಟ ಶಾರುಕ್‌ ಖಾನ್‌ ಮೇಲೆ ಹೇರಿದ್ದ ಕ್ರೀಡಾಂಗಣ ಪ್ರವೇಶ ನಿಷೇಧ ತೆರವು ಸೇರಿದಂತೆ ಬಿಸಿಸಿಐ ಹಾಕಿದ್ದ ಒಟ್ಟು 14 ಬೇಡಿಕೆಗಳಿಗೆ ಮುಂಬೈ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಒಪ್ಪಿಗೆ ನೀಡಿದೆ.‘ಯಾವುದೇ ಸಮಸ್ಯೆ ಎದುರಾದರೂ ಐಪಿಎಲ್‌ ಫೈನಲ್‌ ಮುಂಬೈನಲ್ಲಿಯೇ ನಡೆಯಬೇಕು ಎಂದು ಅಧ್ಯಕ್ಷ ಶರದ್‌ ಪವಾರ್‌ ಅವರು ಪಟ್ಟು ಹಿಡಿದಿದ್ದರು. ಆದ್ದರಿಂದ ಬಿಸಿಸಿಐನ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ಎಂಸಿಎ ಉಪಾಧ್ಯಕ್ಷ ರವಿ ಸಾವಂತ್‌ ತಿಳಿಸಿದ್ದಾರೆ.ಪೂರ್ವ ವೇಳಾಪಟ್ಟಿಯಂತೆ ಐಪಿಎಲ್ ಫೈನಲ್‌ ಮುಂಬೈನಲ್ಲಿ ನಡೆ ಯಬೇಕಿತ್ತು. ಆದರೆ, ಐಪಿಎಲ್ ಆಡಳಿತ ಮಂಡಳಿ ಕೈಗೊಂಡ ದಿಢೀರ್‌ ನಿರ್ಧಾರದಲ್ಲಿ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಿತ್ತು. ಇದ ರಿಂದ ಎಂಸಿಎ ಭಾರಿ ಅಸಮಾ ಧಾನಗೊಂಡಿತ್ತು. ಫೈನಲ್‌ ಪಂದ್ಯ ಮುಂಬೈನಲ್ಲಿಯೇ ನಡೆಸಬೇಕಾ ದರೆ ನಮ್ಮ ಷರತ್ತುಗಳಿಗೆ ಒಪ್ಪಿಕೊಳ್ಳಬೇಕು ಎಂದು ಬಿಸಿಸಿಐ ಹೇಳಿತ್ತು. ಆ ಬೇಡಿಕೆ ಗಳನ್ನು ಎಂಸಿಎ ಈಗ ಒಪ್ಪಿಕೊಂಡಿದೆ. ಆದ್ದರಿಂದ ಫೈನಲ್‌ ಪಂದ್ಯ ಪೂರ್ವ ನಿಗದಿಯಂತೆ ಮುಂಬೈನಲ್ಲಿಯೇ ನಡೆಯುವ ಸಾಧ್ಯತೆ ಅಧಿಕವಾಗಿದೆ. ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳುವುದಷ್ಟೇ ಬಾಕಿ.2012ರಲ್ಲಿ ಶಾರುಕ್ ಖಾನ್‌ ಎಂಸಿಎ ಕ್ರೀಡಾಂಗಣದ ಸಿಬ್ಬಂದಿ ಮತ್ತು ಅಧಿಕಾರಿಗಳ ಜೊತೆ ಅನುಚಿತವಾಗಿ ವರ್ತಿಸಿದ್ದ ಕಾರಣ ಅವರ ಮೇಲೆ ಐದು ವರ್ಷ ನಿಷೇಧ ಶಿಕ್ಷೆ ಹೇರಲಾಗಿತ್ತು. ಇದನ್ನು ಎಂಸಿಎ ಈಗ ತಾತ್ಕಾಲಿಕವಾಗಿ ಹಿಂದಕ್ಕೆ ತೆಗೆದುಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.