ಮುಂಬೈ ಇಂಡಿಯನ್ಸ್‌ಗೆ ತಮೀಮ್: ಸಚಿನ್ ಒಲವು

7

ಮುಂಬೈ ಇಂಡಿಯನ್ಸ್‌ಗೆ ತಮೀಮ್: ಸಚಿನ್ ಒಲವು

Published:
Updated:

ಢಾಕಾ (ಐಎಎನ್‌ಎಸ್) : ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಾಲ್ಕನೇ ಆವೃತ್ತಿ ಟೂರ್ನಿಯ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಾಂಗ್ಲಾದ ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಅವರನ್ನು ಸೇರ್ಪಡೆ ಮಾಡಿಕೊಳ್ಳದಿರುವುದರ ಬಗ್ಗೆ ಸಚಿನ್ ತೆಂಡೂಲ್ಕರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಈ ವಿಷಯವನ್ನು ಐಎಎನ್‌ಎಸ್ ಸುದ್ದಿ ಸಂಸ್ಥೆಗೆ ಸ್ವತಃ ತಮೀಮ್ ಬಹಿರಂಗಪಡಿಸಿದ್ದಾರೆ.“ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದ ನಂತರ ಭಾರತ ತಂಡ ಮರಳುವ ಸಂದರ್ಭದಲ್ಲಿ  ಸಚಿನ್ ಅವರನ್ನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಚರ್ಚೆ ನಡೆಸುವಾಗ ಮುಂಬೈ ಇಂಡಿಯನ್ಸ್ ತಂಡದ ಹರಾಜು ಪ್ರಕ್ರಿಯೆಯಲ್ಲಿ ತಮ್ಮನ್ನು ಆಯ್ಕೆ ಮಾಡದಿರುವುದು ಸಚಿನ್ ಗಮನಕ್ಕೆ ಬಂತು. ಆಗ ಅಚ್ಚರಿ ವ್ಯಕ್ತಪಡಿಸಿದ ಅವರು, ಈ ಕುರಿತು ತಂಡದ ಫ್ರಾಂಚೈಸಿ ಮಾಲೀಕರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು. ಅಲ್ಲದೇ ನಿಯಮಾವಳಿಯಲ್ಲಿ ಅವಕಾಶವಿದ್ದರೆ ಮರಳಿ ನಿಮ್ಮನ್ನು ಆಯ್ಕೆ ಮಾಡಲು ಶಿಫಾರಸ್ಸು ಮಾಡಲು ಕೋರುವುದಾಗಿ ತಿಳಿಸಿದ್ದಾರೆ” ಎಂದು ತಮೀಮ್ ಹೇಳಿದರು.“ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಸಚಿನ್ ಭಾರತದಲ್ಲಿ ಇರಲಿಲ್ಲ. ಆದ್ದರಿಂದ ಅವರಿಗೆ ಈ ವಿಷಯ ಗಮನಕ್ಕೆ ಬಂದಿರಲಿಲ್ಲ. ಫ್ರ್ಯಾಂಚೈಸಿ ಆಡಳಿತದೊಂದಿಗೆ ಮಾತನಾಡಿ, ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಮನವಿ ಮಾಡುವುದಾಗಿ ಅವರು (ಸಚಿನ್) ವಾಗ್ದಾನ ನೀಡಿದ್ದಾರೆ” ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮೊಹಮ್ಮಡಾನ್ ಸ್ಪೋರ್ಟ್ಸ್ ಕ್ಲಬ್‌ನ ಕ್ರಿಕೆಟ್ ಅಧ್ಯಕ ಲುತ್ಫಾರ್ ರೆಹಮಾನ್ ಬಾದಲ್, “ತಮೀಮ್ ಪ್ರತಿಭೆ ಮತ್ತು ಆಟದ ಬಗ್ಗೆ ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್‌ನ ಈ ಋತುವಿನ ಬಜೆಟ್‌ನಲ್ಲಿ ಇನ್ನೂ 1.25, 000 ಡಾಲರ್‌ಗೆ ಅವಕಾಶವಿದೆ. ಇದರಲ್ಲಿ ಭಾರತದ ಆಟಗಾರರನನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಅವರಿಗೆ ಇದೆ. ತಮೀಮ್‌ಗೆ ಅವಕಾಶ ಸಿಗುವುದೊ ಇಲ್ಲವೋ ಕಾದು ನೋಡಬೇಕು” ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry