ಮುಂಬೈ ಇಂಡಿಯನ್ಸ್‌ ಸಾಧಾರಣ ಮೊತ್ತ

7
ಚಾಂಪಿಯನ್ಸ್‌ ಲೀಗ್‌: ರೋಹಿತ್‌ ಆಸರೆ

ಮುಂಬೈ ಇಂಡಿಯನ್ಸ್‌ ಸಾಧಾರಣ ಮೊತ್ತ

Published:
Updated:

ಜೈಪುರ (ಪಿಟಿಐ): ಮುಂಬೈ ಇಂಡಿಯನ್ಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್‌ ಗೆಲುವಿಗೆ ಸಾಧಾರಣ ಮೊತ್ತದ ಗುರಿ ನೀಡಿದೆ.ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಇಂಡಿಯನ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 142 ರನ್‌ ಪೇರಿಸಿತು. ನಾಯಕ ರೋಹಿತ್‌ ಶರ್ಮ (44, 37 ಎಸೆತ, 3 ಬೌಂ, 2 ಸಿಕ್ಸರ್‌) ಮತ್ತು ಕೀರನ್‌ ಪೊಲಾರ್ಡ್‌ (42, 36 ಎ, 4 ಬೌಂ, 2 ಸಿ) ತಂಡಕ್ಕೆ ಆಸರೆಯಾದರು.ಈ ಗುರಿ ಬೆನ್ನಟ್ಟಿರುವ ರಾಹುಲ್‌ ದ್ರಾವಿಡ್‌ ನೇತೃತ್ವದ ರಾಯಲ್ಸ್‌ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಎಂಟು ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 56 ರನ್‌ ಗಳಿಸಿತ್ತು.ಟಾಸ್‌ ಗೆದ್ದ ರಾಯಲ್ಸ್‌ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿತು. ಮುಂಬೈ ಇಂಡಿಯನ್ಸ್‌ಗೆ ಅಬ್ಬರದ ಆರಂಭ ಲಭಿಸಲಿಲ್ಲ. ಡ್ವೇನ್‌ ಸ್ಮಿತ್‌ (9), ಸಚಿನ್‌ ತೆಂಡೂಲ್ಕರ್‌ (15, 17 ಎಸೆತ) ಮತ್ತು ದಿನೇಶ್‌ ಕಾರ್ತಿಕ್‌ (2) ಬೇಗನೇ ಪೆವಿಲಿ ಯನ್‌ಗೆ ಮರಳಿದರು.ಉತ್ತಮ ಆರಂಭ ಪಡೆದಿದ್ದ ಸಚಿನ್‌ ಅವರು ಸ್ಟುವರ್ಟ್‌ ಬಿನ್ನಿ ಎಸೆತದಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.ಅಂಬಟಿ ರಾಯುಡು (3) ಕೂಡಾ ಬೇಗನೇ ಔಟಾದ ಕಾರಣ ಐಪಿಎಲ್ ಚಾಂಪಿಯನ್ನರು ಒತ್ತಡಕ್ಕೆ ಒಳಗಾ ದರು. ಈ ಹಂತದಲ್ಲಿ ಜೊತೆಯಾದ ರೋಹಿತ್ ಹಾಗೂ ಪೊಲಾರ್ಡ್‌ ಐದನೇ ವಿಕೆಟ್‌ಗೆ 52 ರನ್‌ ಸೇರಿಸಿ ದರು. ಕೊನೆಯ ಐದು ಓವರ್‌ಗಳಲ್ಲಿ ಮುಂಬೈನ ತಂಡ 55 ರನ್‌ ಕಲೆಹಾಕಿತು.ಸಂಕ್ಷಿಪ್ತ ಸ್ಕೋರ್‌: ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 142 (ಸಚಿನ್‌ ತೆಂಡೂಲ್ಕರ್‌ 15, ರೋಹಿತ್‌ ಶರ್ಮ 44, ಕೀರನ್‌ ಪೊಲಾರ್ಡ್‌ 42, ವಿಕ್ರಮ್‌ಜೀತ್‌ ಮಲಿಕ್‌ 24ಕ್ಕೆ 3, ಶೇನ್‌ ವಾಟ್ಸನ್‌ 26ಕ್ಕೆ 1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry