ಮಂಗಳವಾರ, ಮೇ 11, 2021
25 °C

ಮುಂಬೈ ಇಂಡಿಯನ್ಸ್ ಅಲ್ಪ ಮೊತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಡೆಲ್ಲಿ     ಡೇರ್‌ಡೆವಿಲ್ಸ್ ಬೌಲರ್‌ಗಳ ಪ್ರಭಾವಿ ದಾಳಿಯ ಮುಂದೆ ಪರದಾಟ ನಡೆಸಿದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸಾಧಾರಣ ಮೊತ್ತ ಪೇರಿಸಿದೆ.ವಾಂಖೇಡೆ ಕ್ರೀಡಾಂಗಣದಲ್ಲಿ ಸೋಮವಾರ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಹರಭಜನ್ ಸಿಂಗ್ ನೇತೃತ್ವದ ತಂಡ 19.2 ಓವರ್‌ಗಳಲ್ಲಿ ಕೇವಲ 92 ರನ್‌ಗಳಿಗೆ ಆಲೌಟಾಯಿತು. 

ಉಮೇಶ್ ಯಾದವ್ (10ಕ್ಕೆ 2), ಶಹಬಾಜ್ ನದೀಮ್ (16ಕ್ಕೆ 2) ಮತ್ತು ಮಾರ್ನ್ ಮಾರ್ಕೆಲ್ (22ಕ್ಕೆ 2) ಅವರ ಬೌಲಿಂಗ್ ದಾಳಿಯನ್ನು ಎದುರಿಸಿ ನಿಲ್ಲಲು ಮುಂಬೈ    ಇಂಡಿಯನ್ಸ್‌ಗೆ ಸಾಧ್ಯವಾಗಲಿಲ್ಲ. ಕೈಬೆರಳಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಸಚಿನ್ ತೆಂಡೂಲ್ಕರ್ ಈ ಪಂದ್ಯದಲ್ಲೂ ಕಣಕ್ಕಿಳಿಯಲಿಲ್ಲ.ನಾಯಕ ಹರಭಜನ್ ಸಿಂಗ್ (33, 22 ಎಸೆತ, 5 ಬೌಂ, 1 ಸಿಕ್ಸರ್) ಈ ತಂಡದ `ಗರಿಷ್ಠ ಸ್ಕೋರರ್~ ಎನಿಸಿದರು. ರೋಹಿತ್ ಶರ್ಮ 29 ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ಪರ ಎರಡಂಕಿಯ ಮೊತ್ತ ತಲುಪಿದ್ದು ಇವರಿಬ್ಬರು ಮಾತ್ರ!ಐದು ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಳಿಕ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಶಹಬಾಜ್ ನದೀಮ್ ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಡೇವಿ ಜೇಕಬ್ಸ್ (0) ಮತ್ತು ರಿಚರ್ಡ್ ಲೆವಿ (1) ಅವರು ನದೀಮ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು.ರೋಹಿತ್ ಶರ್ಮ ಮತ್ತು ಅಂಬಟಿ ರಾಯುಡು ಮೂರನೇ ವಿಕೆಟ್‌ಗೆ 25 ರನ್ ಸೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡುವ ಪ್ರಯತ್ನ ನಡೆಸಿದರು. ಆದರೆ ರಾಯುಡು (4) ರನೌಟ್ ಆದ ಕಾರಣ ಮುಂಬೈಗೆ ಮತ್ತೆ ಹಿನ್ನಡೆ ಉಂಟಾಯಿತು.ಈ ಹಂತದಲ್ಲಿ ಉಮೇಶ್ ಯಾದವ್ ಅವರು ಕೀರನ್ ಪೊಲಾರ್ಡ್ ಮತ್ತು ದಿನೇಶ್ ಕಾರ್ತಿಕ್ ವಿಕೆಟ್ ಪಡೆದರು. ರೋಹಿತ್ ಕೂಡಾ ಅಜಿತ್ ಅಗರ್‌ಕರ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದ್ದರಿಂದ ಮುಂಬೈ ಅತೀವ ಒತ್ತಡಕ್ಕೆ ಒಳಗಾಯಿತು.ಕೊನೆಯಲ್ಲಿ ಹರಭಜನ್ ಕೆಲವೊಂದು ಭರ್ಜರಿ ಹೊಡೆತಗಳ ಮೂಲಕ ನೆರೆದ ಪ್ರೇಕ್ಷಕರಿಗೆ ಅಲ್ಪ ಮನರಂಜನೆ ನೀಡಿದರು.

ಸ್ಕೋರ್ ವಿವರ

ಮುಂಬೈ ಇಂಡಿಯನ್ಸ್: 19.2 ಓವರ್‌ಗಳಲ್ಲಿ 92ರಿಚರ್ಡ್ ಲೆವಿ ಬಿ ಶಹಬಾಜ್ ನದೀಮ್  01ಡೇವಿ ಜೇಕಬ್ಸ್ ಬಿ ಶಹಬಾಜ್ ನದೀಮ್  00ರೋಹಿತ್ ಶರ್ಮ ಸಿ ಟೇಲರ್ ಬಿ ಅಜಿತ್ ಅಗರ್‌ಕರ್  29ಅಂಬಟಿ ರಾಯುಡು ರನೌಟ್  04ಕೀರನ್ ಪೊಲಾರ್ಡ್ ಸಿ ಟೇಲರ್ ಬಿ ಉಮೇಶ್ ಯಾದವ್  01ದಿನೇಶ್ ಕಾರ್ತಿಕ್ ಸಿ ಪೀಟರ್ಸನ್ ಬಿ ಉಮೇಶ್ ಯಾದವ್  03ಹರಭಜನ್ ಸಿಂಗ್ ಸಿ ಓಜಾ ಬಿ ಮಾರ್ನ್ ಮಾರ್ಕೆಲ್  33ಕ್ಲಿಂಟ್ ಮೆಕೇ ಸಿ ಯಾದವ್ ಬಿ ಇರ್ಫಾನ್ ಪಠಾಣ್  08ಆರ್.ಪಿ. ಸಿಂಗ್ ಬಿ ಮಾರ್ನ್ ಮಾರ್ಕೆಲ್  00ಪ್ರಗ್ಯಾನ್ ಓಜಾ ಬಿ ಅಜಿತ್ ಅಗರ್‌ಕರ್  03ಮುನಾಫ್ ಪಟೇಲ್ ಔಟಾಗದೆ  01ಇತರೆ: (ಲೆಗ್‌ಬೈ-5, ವೈಡ್-3, ನೋಬಾಲ್-1)  09ವಿಕೆಟ್ ಪತನ: 1-2 (ಜೇಕಬ್ಸ್; 1.5), 2-5 (ಲೆವಿ; 3.1), 3-30 (ರಾಯುಡು; 7.1), 4-38 (ಪೊಲಾರ್ಡ್; 8.3), 5-41 (ರೋಹಿತ್; 9.3), 6-44 (ಕಾರ್ತಿಕ್; 10.2), 7-78 (ಮೆಕೇ; 14.5), 8-80 (ಆರ್.ಪಿ ಸಿಂಗ್; 15.5), 9-89 (ಹರಭಜನ್; 17.5), 10-92 (ಪ್ರಗ್ಯಾನ್; 19.2)

ಬೌಲಿಂಗ್: ಇರ್ಫಾನ್ ಪಠಾಣ್ 4-1-12-1, ಶಹಬಾಜ್ ನದೀಮ್ 4-0-16-2, ಮಾರ್ನ್ ಮಾರ್ಕೆಲ್ 4-1-22-2, ಅಜಿತ್ ಅಗರ್‌ಕರ್ 3.2-0-27-2, ಉಮೇಶ್ ಯಾದವ್ 4-0-10-2

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.