ಭಾನುವಾರ, ಮೇ 16, 2021
26 °C

ಮುಂಬೈ ಇಂಡಿಯನ್ಸ್ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ: ಮುಂಬೈ ಇಂಡಿಯನ್ ಗೆಲುವಿಗೆ ಅಂತಿಮ ಓವರ್‌ನಲ್ಲಿ 18 ರನ್‌ಗಳು ಬೇಕಿದ್ದರು. ಕ್ರೀಸ್‌ನಲ್ಲಿದ್ದದ್ದು ರೋಹಿತ್ ಶರ್ಮ ಮತ್ತು ಜೇಮ್ಸ ಫ್ರಾಂಕ್ಲಿನ್. ನೆರೆದ ಪ್ರೇಕ್ಷಕರು ಉಸಿರು ಬಿಗಿಹಿಡಿದು ನಿಂತಿದ್ದ ಕ್ಷಣವದು.ಡೆಕ್ಕನ್ ಚಾರ್ಜರ್ಸ್ ತಂಡದ ಡೇನಿಯಲ್ ಕ್ರಿಸ್ಟಿಯನ್ ಎಸೆದ ಅಂತಿಮ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಫಾಂಕ್ಲಿನ್ ಏಳು ರನ್ (4, 2, 1) ಕಲೆಹಾಕಿದರು. ಇನ್ನುಳಿದ ಮೂರು ಎಸೆತಗಳಲ್ಲಿ 11 ರನ್‌ಗಳು ಬೇಕು. ನಾಲ್ಕನೇ ಎಸೆತವನ್ನು ರೋಹಿತ್ ಸಿಕ್ಸರ್‌ಗೆ ಅಟ್ಟಿದರು. ಮುಂದಿನ ಎಸೆತದಲ್ಲಿ ಎರಡು ರನ್‌ಗಳು ಬಂದವು. ಅಂತಿಮ ಎಸೆತದಲ್ಲಿ ಚೆಂಡನ್ನು ಲಾಂಗ್ ಆನ್ ಕಡೆ ಸಿಕ್ಸರ್‌ಗೆ ಅಟ್ಟಿದ ರೋಹಿತ್ ಮುಂಬೈ ಇಂಡಿಯನ್ಸ್‌ಗೆ ರೋಚಕ ಗೆಲುವು ತಂದಿತ್ತರು.ಮುಂಬೈ ಇಂಡಿಯನ್ಸ್ ಆಟಗಾರರು ಅಂಗಳಕ್ಕೆ ಆಗಮಿಸಿ ಗೆಲುವಿನ ಸಂಭ್ರಮ ಆಚರಿಸಿದರೆ, ಚಾರ್ಜಸ್ ತಂಡದ ಆಟಗಾರರು ನಿರಾಸೆಯಿಂದ ತಲೆತಗ್ಗಿಸಿ ನಿಂತರು. 73 ರನ್‌ಗಳೊಂದಿಗೆ (50 ಎಸೆತ, 4 ಬೌಂ, 5 ಸಿಕ್ಸರ್) ಔಟಾಗದೆ ಉಳಿದ ರೋಹಿತ್ ಮುಂಬೈ ಇಂಡಿಯನ್ಸ್‌ಗೆ ಐದು ವಿಕೆಟ್‌ಗಳ ಗೆಲುವು ತಂದಿತ್ತರು.ಡಾ.ವೈ.ಎಸ್.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಕ್ಕನ್ ಚಾರ್ಜರ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 138 ರನ್ ಪೇರಿಸಿತು. ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 142 ರನ್ ಗಳಿಸಿ ಜಯ ಸಾಧಿಸಿತು.ಡೇಲ್ ಸ್ಟೇಯ್ನ (12ಕ್ಕೆ 3) ಅವರ ಮಾರಕ ಬೌಲಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ಆರಂಭಿಕ ಕುಸಿತ ಅನುಭವಿಸಿತ್ತು. ಆದರೆ ರೋಹಿತ್ ಅಸಾಮಾನ್ಯ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ಡೆಕ್ಕನ್ ಚಾರ್ಜರ್ಸ್ ತಂಡದ ಆರಂಭವೇ ಸರಿ ಇರಲಿಲ್ಲ. ಇದಕ್ಕೆ ಕಾರಣ ಮುನಾಫ್ (20ಕ್ಕೆ4). ಆದರೆ ಶಿಖರ್ ಧವನ್ (41; 24 ಎ, 2 ಬೌಂ, 4 ಸಿ.) ತಂಡಕ್ಕೆ ಆಸರೆಯಾದರು. ಅಂಪೈರ್ ತೀರ್ಪಿನ ಗೊಂದಲ: ಕುಮಾರ ಸಂಗಕ್ಕಾರ ವಿಕೆಟ್ ಪತನ ಗೊಂದಲಕ್ಕೆ ಕಾರಣವಾಯಿತು. ಮುನಾಫ್ ಹಾಕಿದ 13ನೇ ಓವರ್‌ನಲ್ಲಿ ಸಂಗಕ್ಕಾರ ಬ್ಯಾಟ್‌ಗೆ ತಾಗಿದ ಚೆಂಡು ವಿಕೆಟ್‌ಗೆ ಬಡಿಯಿತು. ಬಳಿಕ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೈಗೆ ತಾಗಿದ ಚೆಂಡು ಮತ್ತೆ ವಿಕೆಟ್‌ಗೆ ಬಡಿಯಿತು. ಇದನ್ನು ಸರಿಯಾಗಿ ಗಮನಿಸದ ಅಂಪೈರ್ ಔಟ್ ನೀಡಲಿಲ್ಲ. ಜೊತೆಗೆ ತೀರ್ಪನ್ನು ಮೂರನೇ ಅಂಪೈರ್ ಪರಿಶೀಲನೆಗೆ ಒಪ್ಪಿಸುವಂತೆ ಮಾಡಿದ ಮನವಿಗೂ ಅವರು ಸ್ಪಂದಿಸಲಿಲ್ಲ.ಹಾಗಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹರಭಜನ್ ಸಿಂಗ್ ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಹಾಗಾಗಿ ಐದು ನಿಮಿಷ ಪಂದ್ಯ ಸ್ಥಗಿತಗೊಂಡಿತ್ತು. ಆದರೆ ಹರಭಜನ್ ಹಾಗೂ ಇತರ ಆಟಗಾರರು ಮತ್ತೆ ಒತ್ತಾಯಿಸಿದ ಕಾರಣ   ಮೂರನೇ ಅಂಪೈರ್‌ಗೆ ಒಪ್ಪಿಸಿದರು. ಆಗ ಸಂಗಕ್ಕಾರ ಔಟೆಂದು ತೀರ್ಪು ಬಂತು.ಸ್ಕೋರ್ ವಿವರ:

ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 138

ಪಾರ್ಥಿವ್ ಪಟೇಲ್ ಸಿ ರೋಹಿತ್ ಶರ್ಮ ಬಿ ಮುನಾಫ್ ಪಟೇಲ್   01

ಶಿಖರ್ ಧವನ್ ಸಿ ಕೀರನ್ ಪೊಲಾರ್ಡ್ ಬಿ ಲಸಿತ್ ಮಾಲಿಂಗ  41

ಭರತ್ ಚಿಪ್ಲಿ ಸಿ ಲಸಿತ್ ಮಾಲಿಂಗ ಬಿ ಮುನಾಫ್ ಪಟೇಲ್   01

ಡೇನಿಯಲ್ ಕ್ರಿಸ್ಟಿಯನ್ ಸಿ ಕೀರನ್ ಪೊಲಾರ್ಡ್ ಬಿ ಮುನಾಫ್ ಪಟೇಲ್  39

ಕುಮಾರ ಸಂಗಕ್ಕಾರ ಬಿ ಮುನಾಫ್ ಪಟೇಲ್  14

ಕೆಮರೂನ್ ವೈಟ್ ಔಟಾಗದೆ  30

ರವಿತೇಜಾ ಬಿ ಲಸಿತ್ ಮಾಲಿಂಗ  04

ಅಮಿತ್ ಮಿಶ್ರಾ ಸಿ ಮುನಾಫ್ ಪಟೇಲ್ ಬಿ ಲಸಿತ್ ಮಾಲಿಂಗ  00

ಡೇಲ್ ಸ್ಟೇಯ್ನ ಬಿ ಕೀರನ್ ಪೊಲಾರ್ಡ್  02

ಅಂಕಿತ್ ಶರ್ಮ ಸಿ ಅಂಬಾಟಿ ರಾಯುಡು ಬಿ ಕೀರನ್ ಪೊಲಾರ್ಡ್  01

ಇತರೆ (ಬೈ-1, ವೈಡ್-4)  05

ವಿಕೆಟ್ ಪತನ: 1-7 (ಪಾರ್ಥಿವ್; 1.4); 2-9 (ಚಿಪ್ಲಿ; 3.1); 3-46 (ಧವನ್; 6.6); 4-82 (ಸಂಗಕ್ಕಾರ; 12.3); 5-123 (ಕ್ರಿಸ್ಟಿಯನ್; 17.6); 6-127 (ತೇಜಾ; 18.2); 7-127 (ಮಿಶ್ರಾ; 18.4); 8-136 (ಸ್ಟೇಯ್ನ; 19.3); 9-138 (ಅಂಕಿತ್; 19.6)

ಬೌಲಿಂಗ್: ಹರಭಜನ್ ಸಿಂಗ್ 4-0-18-0, ಮುನಾಫ್ ಪಟೇಲ್ 4-0-20-4, ಲಸಿತ್ ಮಾಲಿಂಗ 4-0-27-3, ಪ್ರಗ್ಯಾನ್ ಓಜಾ 4-0-39-0 (ವೈಡ್-1), ಕೀರನ್  ಪೊಲಾರ್ಡ್ 4-0-33-2 (ವೈಡ್-2).

ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 142

ಟಿ. ಸುಮನ್ ಸಿ ಮತ್ತು ಡೇಲ್ ಸ್ಟೇಯ್ನ 05

ರಿಚರ್ಡ್ ಲೆವಿ ಬಿ ಡೇಲ್ ಸ್ಟೇಯ್ನ 03

ರೋಹಿತ್ ಶರ್ಮ ಔಟಾಗದೆ 73

ಅಂಬಾಟಿ ರಾಯುಡು ಸಿ ಧವನ್ ಬಿ ಅಮಿತ್ ಮಿಶ್ರಾ 19

ಕೀರನ್ ಪೊಲಾರ್ಡ್ ಸಿ ಧವನ್ ಬಿ ಡೇನಿಯಲ್ ಕ್ರಿಸ್ಟಿಯನ್ 24

ದಿನೇಶ್ ಕಾರ್ತಿಕ್ ಬಿ ಡೇಲ್ ಸ್ಟೇಯ್ನ 07

ಜೇಮ್ಸ ಫ್ರಾಂಕ್ಲಿನ್ ಔಟಾಗದೆ 07

ಇತರೆ: (ಬೈ-2, ಲೆಗ್‌ಬೈ-2) 04

ವಿಕೆಟ್ ಪತನ: 1-7 (ಸುಮನ್; 1.5), 2-10 (ಲೆವಿ; 3.6), 3-58 (ರಾಯುಡು; 11.2), 4-95 (ಪೊಲಾರ್ಡ್; 16.2), 5-120 (ಕಾರ್ತಿಕ್; 18.5)

ಬೌಲಿಂಗ್: ಅಂಕಿತ್ ಶರ್ಮ 4-0-18-0, ಡೇಲ್ ಸ್ಟೇಯ್ನ 4-1-12-3, ಡೇನಿಯಲ್ ಕ್ರಿಸ್ಟಿಯನ್ 4-0-49-1, ಆನಂದ್ ರಾಜನ್ 2-0-9-0, ಅಮಿತ್ ಮಿಶ್ರಾ 4-0-31-1, ಕೆಮರೂನ್ ವೈಟ್ 2-0-19-0

ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 5 ವಿಕೆಟ್ ಗೆಲುವು

ಪಂದ್ಯಶ್ರೇಷ್ಠ: ರೋಹಿತ್ ಶರ್ಮ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.