ಭಾನುವಾರ, ಮಾರ್ಚ್ 7, 2021
32 °C

ಮುಂಬೈ ಕಡಲತೀರದಲ್ಲಿ 30 ಅಡಿ ಉದ್ದದ ತಿಮಿಂಗಿಲ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ ಕಡಲತೀರದಲ್ಲಿ 30 ಅಡಿ ಉದ್ದದ ತಿಮಿಂಗಿಲ ಸಾವು

ಮುಂಬೈ(ಪಿಟಿಐ): 30 ಅಡಿ ಉದ್ದದ ಮೃತ ತಿಮಿಂಗಿಲವೊಂದು ಮುಂಬೈನ ಕಡಲ ತೀರದ ಪ್ರಸಿದ್ಧ ಜುಹು ಬೀಚ್‌ನಲ್ಲಿ ಗುರುವಾರ ರಾತ್ರಿ ಕಾಣಿಸಿಕೊಂಡಿದೆ.ಕಡಲ ತೀರದಲ್ಲಿ ರಾತ್ರಿ ತಿಮಿಂಗಿಲ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು, ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ತಿಮಿಂಗಿಲದ ರಕ್ಷಣೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ನೌಕಾ ಜೀವಶಾಸ್ತ್ರಜ್ಞರನ್ನು ಸಂಪರ್ಕಿಸಿದ್ದಾರೆ. ಆದರೆ, ತಿಮಿಂಗಿಲ ಬದುಕುಳಿದಿಲ್ಲ.ಆಳವಿಲ್ಲದ ಸಮುದ್ರದ ನೀರಿನಲ್ಲಿ ತಿಮಿಂಗಿಲಗಳು ದಡಕ್ಕೆ ದೂಡಲ್ಪಡುತ್ತವೆ. ತಿರುಚೆಂಡೂರು ಸಮುದ್ರ ತೀರದಲ್ಲಿ ಈಚೆಗೆ ಹಲವು ತಿಮಿಂಗಿಲಗಳು ದಡಕ್ಕೆ ತಳ್ಳಲ್ಪಟ್ಟು ಮೃತಪಟ್ಟಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.