ಮುಂಬೈ: ಚಿನ್ನ ರೂ 125 ಇಳಿಕೆ- ಬೆಳ್ಳಿ ರೂ 205 ಏರಿಕೆ

ಮಂಗಳವಾರ, ಜೂಲೈ 23, 2019
20 °C

ಮುಂಬೈ: ಚಿನ್ನ ರೂ 125 ಇಳಿಕೆ- ಬೆಳ್ಳಿ ರೂ 205 ಏರಿಕೆ

Published:
Updated:

ಮುಂಬೈ(ಪಿಟಿಐ): ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಮತ್ತಷ್ಟು ಇಳಿದಿದ್ದು, ಮಂಗಳವಾರ 10 ಗ್ರಾಂ ಸ್ಟಾಂಡರ್ಡ್ ಚಿನ್ನ ರೂ 29,430ರಲ್ಲಿ ಮಾರಾಟವಾಯಿತು. ಹಿಂದಿನ ದಿನಕ್ಕೆ ಹೋಲಿಸಿದರೆ ರೂ120ರಷ್ಟು ಬೆಲೆ ಕಡಿಮೆ ಆಗಿತ್ತು.ಪರಿಶುದ್ಧ ಚಿನ್ನವೂ ರೂ125ರಷ್ಟು ತಗ್ಗಿ ರೂ29,555ಕ್ಕಿಳಿಯಿತು. ಆದರೆ ಬೆಳ್ಳಿ ಧಾರಣೆ ಕೆ.ಜಿ.ಗೆ ರೂ205ರಷ್ಟು ಹೆಚ್ಚಳವಾಗಿ ರೂ53,240ಕ್ಕೇರಿತು.ನವದೆಹಲಿ ಪೇಟೆಯಲ್ಲಿ ರೂ140ರಷ್ಟು ಇಳಿದ 10 ಗ್ರಾಂ ಸ್ಟಾಂಡರ್ಡ್ ಚಿನ್ನ ರೂ29,860ರಲ್ಲಿ ಮತ್ತು ಪರಿಶುದ್ಧ ಚಿನ್ನ ರೂ30,060ರಲ್ಲಿ ಮಾರಾಟವಾಯಿತು. ಬೆಳ್ಳಿ ದರ ಕೆ.ಜಿ.ಗೆ ರೂ175ರಷ್ಟು ಏರಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry