ಮುಂಬೈ: ಟಾಟಾ ಕೇಂದ್ರ ಕಚೇರಿಯಲ್ಲಿ ಬೆಂಕಿ, 3 ಸಾವು

7

ಮುಂಬೈ: ಟಾಟಾ ಕೇಂದ್ರ ಕಚೇರಿಯಲ್ಲಿ ಬೆಂಕಿ, 3 ಸಾವು

Published:
Updated:

ಮುಂಬೈ (ಪಿಟಿಐ): ದಕ್ಷಿಣ ಮುಂಬೈಯಲ್ಲಿ ಟಾಟಾ ಸಮೂಹ ಸಂಸ್ಥೆಯ ಕಚೇರಿಗಳು ಇರುವ ಬಾಂಬೆ ಹೌಸ್ ಟ್ರೇಡಿಂಗ್ ಕಟ್ಟಡದಲ್ಲಿ ಬುಧವಾರ ಭಾರಿ ಅಗ್ನಿ ದುರಂತ ಸಂಭವಿಸಿದ್ದು ಮೂವರು ಮೃತರಾಗಿ, ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ.~ಮೂವರು ತೀವ್ರ ಸುಟ್ಟಗಾಯಗಳಿಗಾಗಿ ದಾಖಲು ಮಾಡಿದ ಬಳಿಕ ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಮೃತರಾದರು~ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದರು. ಗಾಯಾಳು ಚೇತರಿಸಿಕೊಳ್ಳುತ್ತಿದ್ದಾನೆ ಎಂದೂ ಅವರು ನುಡಿದರು.ಬೆಳಗ್ಗೆ 9.20ರ ಸುಮಾರಿಗೆ ಟಾಟಾ ಸಮೂಹ ಸಂಸ್ಥೆಗಳು ಕೇಂದ್ರ ಕಚೇರಿಯಾದ ಬಾಂಬೆ ಹೌಸ್ ಕಟ್ಟಡದ ತಳ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು.ಅಗ್ನಿದುರಂತದ ಕಾರಣ ಮತ್ತು ಹಾನಿಯ ಅಂದಾಜು ಇನ್ನೂ ಗೊತ್ತಾಗಿಲ್ಲ. ಆದರೆ ಕಿಚ್ಚನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅವರು ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry