ಸೋಮವಾರ, ನವೆಂಬರ್ 18, 2019
26 °C

ಮುಂಬೈ ತಂಡ ಸೇರಿಕೊಂಡ ಮಾಲಿಂಗ

Published:
Updated:

ಮುಂಬೈ (ಪಿಟಿಐ): ಐಪಿಎಲ್‌ನ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಮುಂಬೈ ಇಂಡಿಯನ್ಸ್ ತಂಡದ ವೇಗಿ ಲಸಿತ್ ಮಾಲಿಂಗ ಭಾನುವಾರ ತಂಡವನ್ನು ಸೇರಿಕೊಂಡಿದ್ದಾರೆ.ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಏಪ್ರಿಲ್ 9ರಂದು ನಡೆಯಲಿರುವ ಪಂದ್ಯದಲ್ಲಿ ಶ್ರೀಲಂಕಾದ ಆಟಗಾರ ಆಡುವ ಸಾಧ್ಯತೆಯಿದೆ. ಮುಂಬೈ ತಂಡ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋಲು ಕಂಡರೆ, ಶನಿವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆಲುವು ಸಾಧಿಸಿತ್ತು.

`ಮಾಲಿಂಗ ತಂಡವನ್ನು ಸೇರಿಕೊಂಡಿದ್ದಾರೆ. ತವರಿನ ಅಂಗಣದಲ್ಲಿ ನಡೆಯಲಿರುವ ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯರಾಗುವ ಸಾಧ್ಯತೆಯಿದೆ. ಈ ವೇಳೆಗೆ ಅವರು ಫಿಟ್ ಆಗಲಿದ್ದಾರೆ' ಎಂದು ಇಂಡಿಯನ್ಸ್ ತಂಡದ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)