ಶನಿವಾರ, ನವೆಂಬರ್ 23, 2019
23 °C

ಮುಂಬೈ ದಾಳಿ ಅಧಿಕಾರಿಗೆ ಸಮನ್ಸ್

Published:
Updated:

ಇಸ್ಲಾಮಾಬಾದ್ (ಪಿಟಿಐ): ಮುಂಬೈ ದಾಳಿ ಸಂಚಿನಲ್ಲಿ ಶಾಮಿಲಾಗಿರುವ ಏಳು ಆರೋಪಿಗಳ ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಶನಿವಾರ ಹಿರಿಯ ತನಿಖಾಧಿಕಾರಿಗೆ ಸಮನ್ಸ್ ಜಾರಿ ಮಾಡಿದೆ.ಭದ್ರತೆಯ ಕಾರಣಕ್ಕಾಗಿ ರಾವಲ್ಪಿಂಡಿಯ ಅಡಿಯಾಲ ಕಾರಾಗೃಹದಲ್ಲಿ ರಹಸ್ಯವಾಗಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಚೌಧರಿ ಹಬೀಬ್-ಉರ್-ರೆಹಮಾನ್, ತನಿಖಾ ಸಂಸ್ಥೆಯ ಹೆಚ್ಚುವರಿ ನಿರ್ದೇಶಕ ಅಲ್ತಾಫ್ ಹುಸೇನ್‌ಗೆ ಸಮನ್ಸ್ ಜಾರಿ ಮಾಡಿದರು.

ಪ್ರತಿಕ್ರಿಯಿಸಿ (+)