ಭಾನುವಾರ, ಮೇ 16, 2021
28 °C

ಮುಂಬೈ ದಾಳಿ: ಖಚಿತ ಮಾಹಿತಿ ಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲ್ಹಾಪುರ/ಮುಂಬೈ, (ಪಿಟಿಐ): ಮುಂಬೈ ತ್ರಿವಳಿ ಸ್ಫೋಟದ ಹಿಂದಿನ ಭಯೋತ್ಪಾದಕ ಸಂಘಟನೆಯ ಬಗ್ಗೆ ಖಚಿತ ಮಾಹಿತಿ ದೊರಕಿದೆ ಎಂದು ಮಹಾರಾಷ್ಟ್ರ ಪೊಲೀಸ್ ಮಹಾ ನಿರ್ದೇಶಕ ಅಜಿತ್ ಪರಸ್‌ನಿಸ್ ಅವರು ಕೊಲ್ಹಾಪುರದಲ್ಲಿ ಶನಿವಾರ ತಿಳಿಸಿದ್ದಾರೆ.ಜುಲೈ 13 ರಂದು ಸಂಭವಿಸಿದ್ದ ಸ್ಫೋಟದ ಹಿಂದಿನ ಸಂಘಟನೆಯ ಬಗ್ಗೆ ಮಾಹಿತಿ ದೊರಕಿದೆ. ಆದರೆ ಈ ಬಗ್ಗೆ ವಿವರವಾದ ತನಿಖೆ ನಡೆಸಬೇಕಾಗಿದೆ ಎಂದು ಅವರು ಹೇಳ್ದ್ದಿದು, ಸಂಘಟನೆಯ ಹೆಸರನ್ನು ಬಹಿರಂಗಪಡಿಸಲಿಲ್ಲ.ಮುಂಬೈನ  ಜವೇರಿ ಬಜಾರ್, ಒಪೇರಾ ಹೌಸ್ ಮತ್ತು ದಾದರ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ವಾಣಿಜ್ಯ ಮಹಾ ನಗರಿಯನ್ನು ನಡುಗಿಸಿತ್ತು. ಪುಣೆಯ ಮಾವಾಲ್‌ನಲ್ಲಿ ಕಳೆದ ತಿಂಗಳು ರೈತರ ಮೇಲೆ ನಡೆಸಿದ ಗೋಲಿಬಾರ್ ಅನ್ನು ಪರಸ್‌ನಿಸ್‌ಸಮರ್ಥಿಸಿಕೊಂಡರು.

 

ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ದಾಳಿ ಮಾಡಿದ್ದರು. ಘಟನೆಯಲ್ಲಿ ಮೂವರು ಮೃತಪಟ್ಟು, ಅನೇಕರು ಗಾಯಗೊಂಡಿದ್ದರು.

 

ಒಂದು ವಾರದ ಹಿಂದೆ ಮಹಾರಾಷ್ಟ್ರ ಸರ್ಕಾರವು ಗೋಲಿಬಾರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿದೆ ಹಾಗೂ ಪುಣೆಯ ನ್ಯಾಯಾಲಯವು ಎಂಟು  ಪೊಲೀಸರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಲು ಆದೇಶಿಸಿದೆ. ಗೋಲಿಬಾರ್ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳು ಪಕ್ಷಪಾತದ ಧೋರಣೆ ತಾಳಿ ವರದಿ ಮಾಡಿವೆ ಎಂದು ಪರಸ್‌ನಿಸ್ ಆಪಾದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.