ಭಾನುವಾರ, ಜೂನ್ 13, 2021
23 °C

ಮುಂಬೈ ದಾಳಿ: ಪಾಟಿ ಸವಾಲು ಒಪ್ಪದ ಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): 26/11ರ ಮುಂಬೈ ದಾಳಿಗೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಸಾಕ್ಷಿಗಳ ಪಾಟಿ ಸವಾಲಿಗೆ ಅವಕಾಶ ಕಲ್ಪಿಸುವಂತೆ ಪಾಕಿಸ್ತಾನದ ನ್ಯಾಯಾಂಗ ಆಯೋಗ ಮಾಡಿರುವ ಮನವಿಯನ್ನು ಮುಂಬೈ ಮೆಟ್ರೊಪಾಲಿಟನ್ ಕೋರ್ಟ್ (ಸಿಎಂಎಂ) ತಿರಿಸ್ಕರಿಸಿದೆ.ಆದಾಗ್ಯೂ ದಾಳಿಯ ಪ್ರಮುಖ ಆರೋಪಿ ಅಜ್ಮಲ್ ಕಸಾಬ್ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿಕೊಂಡಿದ್ದ ನ್ಯಾಯಾಧೀಶರ ಹೇಳಿಕೆ ಪಡೆಯಲು ಆಯೋಗಕ್ಕೆ ಚೀಫ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್. ಎಸ್. ಶಿಂಧೆ ಅನುಮತಿ ನೀಡಿದ್ದಾರೆ.ಸಾಕ್ಷಿಗಳ ಪಾಟಿ ಸವಾಲಿಗೆ ಅನುಮತಿ ನೀಡುವುದಿಲ್ಲ ಮತ್ತು ದಾಳಿಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕಸಾಬ್ ಭೇಟಿಗೂ ಅವಕಾಶ ಇಲ್ಲ ಎಂದು ಭಾರತ ಸರ್ಕಾರ ಈಗಾಗಲೇ ಪಾಕ್ ನ್ಯಾಯಾಂಗ ಆಯೋಗಕ್ಕೆ ಸ್ಪಷ್ಟಪಡಿಸಿದೆ. ಆದರೂ, ಆಯೋಗ ಶುಕ್ರವಾರ ಸಿಎಂಎಂ ಮುಂದೆ ಸಾಕ್ಷಿಗಳ ಪಾಟಿ ಸವಾಲು ನಡೆಸಿತು. ಸರ್ಕಾರಿ ವಿಶೇಷ ಅಭಿಯೋಜಕ ಉಜ್ವಲ್ ನಿಕ್ಕಂ ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದರು.ತಮ್ಮ ಮನವಿ ತಿರಸ್ಕರಿಸಿದ್ದರಿಂದ ಪಾಕ್ ಆಯೋಗ ಪಾಟಿ ಸವಾಲು ಕೈ ಬಿಟ್ಟು ಹೇಳಿಕೆಯನ್ನಷ್ಟೇ ದಾಖಲಿಸಿಕೊಂಡಿತು.~

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.