ಶನಿವಾರ, ಏಪ್ರಿಲ್ 17, 2021
33 °C

ಮುಂಬೈ ದಾಳಿ: ಹುತಾತ್ಮರಿಗೆ ಶ್ರದ್ಧಾಂಜಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ ದಾಳಿ: ಹುತಾತ್ಮರಿಗೆ ಶ್ರದ್ಧಾಂಜಲಿ

ಮುಂಬೈ (ಪಿಟಿಐ): 26/11/2008ರ ಮುಂಬೈ ಮೇಲಿನ  ಉಗ್ರರ ದಾಳಿಗೆ  ಸೋಮವಾರ ನಾಲ್ಕು ವರ್ಷ ತುಂಬಿದ ಹಿನ್ನೆಲೆಯಲ್ಲಿ ದಾಳಿಯ ಸಂದರ್ಭದಲ್ಲಿ ಮೃತಪಟ್ಟ ಅಮಾಯಕರು, ಪೊಲೀಸರು ಮತ್ತು ಯೋಧರಿಗೆ  ಶ್ರದ್ಧಾಂಜಲಿ ಸಲ್ಲಿಸಲಾಯಿತು.ಮರೀನ್ ಲೈನ್ಸ್‌ನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶರದ್ ಪವಾರ್, ಮಹಾರಾಷ್ಟ್ರ ರಾಜ್ಯಪಾಲ ಕೆ. ಶಂಕರನಾರಾಯಣನ್, ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್, ಗೃಹ ಸಚಿವ ಆರ್.ಆರ್. ಪಾಟೀಲ್, ಮುಂಬೈ ಪೊಲೀಸ್ ಆಯುಕ್ತರು ಸೇರಿದಂತೆ ಇತರರು ಹಾಜರಿದ್ದರು. ಉಗ್ರ ಕಸಾಬ್‌ನನ್ನು ನೇಣು ಹಾಕಿದ್ದರಿಂದ ದಾಳಿಯ ವೇಳೆ ಬಲಿಯಾದ ನನ್ನ ಪತಿ  ಹೇಮಂತ್ ಕರ್ಕರೆ ಏನು ವಾಪಸ್ ಬರಲ್ಲ ಎಂದು ಕರ್ಕರೆ ಪತ್ನಿ ಕವಿತಾ ಕರ್ಕರೆ ಹೇಳಿದ್ದಾರೆ.ಗುಡಗಾಂವ್:  ಇಲ್ಲಿನ ಎನ್‌ಎಸ್‌ಜಿ ಯೋಧರು ರಕ್ತದಾನ ಮಾಡುವು ಮೂಲಕ ಮುಂಬೈ ದಾಳಿ ಕಹಿ ಘಟನೆಯನ್ನು ವಿಭಿನ್ನವಾಗಿ ನೆನಪಿಸಿಕೊಂಡರು.ಸುಮಾರು 100ಕ್ಕೂ ಅಧಿಕ `ಬ್ಲ್ಯಾಕ್ ಕ್ಯಾಟ್' ಯೋಧರು 128 ಯೂನಿಟ್ ರಕ್ತ ದಾನ ಮಾಡಿದ್ದಾರೆ ಎಂದು  ಎನ್‌ಎಸ್‌ಜಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.ಸಂಸತ್ತಿನಲ್ಲೂ ಶ್ರದ್ಧಾಂಜಲಿ : ಸಂಸತ್ತಿನ ಉಭಯ ಸದನಗಳಲ್ಲಿ ಸೋಮವಾರ 26/11ರ ಮುಂಬೈ ದಾಳಿಯ ವೇಳೆ ಮೃತಪಟ್ಟವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಲೋಕಸಭೆಯ ಸ್ಪೀಕರ್ ಮೀರಾ ಕುಮಾರ್ ಮತ್ತು ರಾಜ್ಯಸಭೆಯ ಸಭಾಪತಿ ಹಮೀದ್ ಅನ್ಸಾರಿ ಅವರು ಸಂದೇಶವನ್ನು ಓದಿ  ಹುತಾತ್ಮ ರಾದವರನ್ನು ಸ್ಮರಿಸಿದರು.

ಮತ್ತೊಂದು ಕೃತಿ

ನವದೆಹಲಿ (ಪಿಟಿಐ): ಉಗ್ರ ಅಜ್ಮಲ್ ಕಸಾಬ್‌ನನ್ನು ಗಲ್ಲಿಗೇರಿಸಿದ ನಂತರ ಮುಂಬೈ ದಾಳಿ ಕುರಿತು ಸಾಲು ಸಾಲುಪುಸ್ತಕಗಳು ಪ್ರಕಟವಾಗುತ್ತಿದ್ದು, ಆ ಸಾಲಿಗೆ `14 ಹವರ್ಸ್‌: ಆನ್ ಇನ್‌ಸೈಡರ್ಸ್‌ ಅಕೌಂಟ್ ಆಫ್ ದಿ ತಾಜ್ ಅಟ್ಯಾಕ್' ಪುಸ್ತಕ ಕೂಡ ಸೇರುತ್ತಿದೆ...!

ಮುಂಬೈ ಮೇಲೆ ಉಗ್ರರ ದಾಳಿ ನಡೆದು ಸೋಮವಾರಕ್ಕೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ ಈ ಕೃತಿ ಬಿಡುಗಡೆಯಾಗಿದೆ. ಅಂಕುರ್ ಚೌಲಾ ಈ ಪುಸ್ತಕದ ಕತೃ. ದಾಳಿ ನಡೆದ ವೇಳೆ ಇವರು ತಾಜ್ ಹೋಟೆಲ್‌ನಲ್ಲಿ ಟ್ರೈನಿಯಾಗಿದ್ದರು.ಉಗ್ರರ ಅಟ್ಟಹಾಸವನ್ನು ಪ್ರತ್ಯಕ್ಷವಾಗಿ ಕಂಡಿರುವ ಅಂಕುರ್, 14 ಗಂಟೆಗಳ ಕಾಲ ಅನುಭವಿಸಿದ `ಮಾನಸಿಕ ತಳಮಳಗಳನ್ನು' ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಜೊತೆಗೆ, ದಾಳಿಯಲ್ಲಿ ಬದುಕುಳಿದವರ ರೋಚಕ ಅನುಭವಗಳು ಈ ಪುಸ್ತಕದಲ್ಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.