ಮುಂಬೈ ಪಾಲಿಕೆ: ಶಿವಸೇನೆ-ಬಿಜೆಪಿ ಮತ್ತೆ ಅಧಿಕಾರಕ್ಕೆ

7

ಮುಂಬೈ ಪಾಲಿಕೆ: ಶಿವಸೇನೆ-ಬಿಜೆಪಿ ಮತ್ತೆ ಅಧಿಕಾರಕ್ಕೆ

Published:
Updated:

ಮುಂಬೈ (ಪಿಟಿಐ): ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ. 227 ಸ್ಥಾನಗಳಲ್ಲಿ ಶಿವಸೇನೆ 77, ಬಿಜೆಪಿ 30 ಸ್ಥಾನ ಗಳಿಸಿ ಅತಿದೊಡ್ಡ ಮೈತ್ರಿಕೂಟವಾಗಿದೆ. ಉಳಿದಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ 27 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 51, ಎನ್‌ಸಿಪಿ 14 ಹಾಗೂ ಇತರರು 28 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.ನಾಸಿಕ್‌ನಲ್ಲಿ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಪುಣೆಯಲ್ಲಿ ಕಾಂಗ್ರೆಸ್-ಎನ್‌ಸಿಪಿ ಬಹುಮತ ಪಡೆದಿವೆ.ಥಾಣೆಯಲ್ಲಿ ಬಿಜೆಪಿ- ಶಿವಸೇನೆ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ. ನಾಗಪುರದಲ್ಲಿಯೂ ಬಿಜೆಪಿ- ಶಿವಸೇನೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಹುಮತಕ್ಕೆ ಐದು ಸ್ಥಾನಗಳ ಕೊರತೆ ಇದೆ.ಸೊಲ್ಲಾಪುರ, ಅಮರಾವತಿ ಮತ್ತು ಪಿಮ್‌ಪ್ರಿ ಚಿಂಚ್ವಾಡಗಳಲ್ಲಿ ಕಾಂಗ್ರೆಸ್-ಎನ್‌ಸಿಪಿ ಸ್ಪಷ್ಟ ಬಹುಮತ ಪಡೆದಿವೆ.

                         

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry