ಸೋಮವಾರ, ಜನವರಿ 20, 2020
22 °C

ಮುಂಬೈ ಬೆಂಕಿ ಆಕಸ್ಮಿಕ: ಐವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಕೆಂಪ್ಸ್ ಕಾರ್ನರ್ ಪ್ರದೇಶದಲ್ಲಿರುವ 26 ಅಂತಸ್ತಿನ ಬಹುಮಹಡಿ ಕಟ್ಟಡ ‘ಮೌಂಟ್ ಫ್ಲಂಟ್‌’ನ 12ನೇ ಅಂತಸ್ತಿನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಐವರು ಮೃತಪಟ್ಟಿದ್ದಾರೆ.‘ಮೃತಪಟ್ಟವರೆಲ್ಲರೂ ಕಟ್ಟಡದ ನಿವಾಸಿಗಳಾಗಿದ್ದಾರೆ. ಮೃತದೇಹಗಳನ್ನು ಜಸ್‌ಲೋಕ್, ಬ್ರೀಚ್ ಕ್ಯಾಂಡಿ, ಜೆ.ಜೆ. ಹಾಗೂ ನಾಯರ್ ಆಸ್ಪತ್ರೆಗಳಿಗೆ ಕಳುಹಿಸ ಲಾಗಿದ್ದು, ಮೃತರ ಗುರುತು ಪತ್ತೆಹಚ್ಚಬೇಕಾಗಿದೆ. ಕಟ್ಟಡದಲ್ಲಿ ಎಲ್‌ಪಿಜಿ ಸಿಲಿಂ ಡರ್‌ಗಳು ಸ್ಫೋಟಗೊಂಡಿದ್ದರಿಂದ, ಕಾರ್ಯಾಚರಣೆ ಯಲ್ಲಿ ತೊಡಗಿದ್ದ ಐವರು ಅಗ್ನಿಶಾಮಕ ಸಿಬ್ಬಂದಿ  ಗಾಯಗೊಂಡಿದ್ದಾರೆ’ ಎಂದು ಅಧಿಕಾರಿಗಳು ಹೇಳಿದರು.

ಪ್ರತಿಕ್ರಿಯಿಸಿ (+)