ಬುಧವಾರ, ನವೆಂಬರ್ 20, 2019
27 °C

ಮುಂಬೈ ಸರಣಿ ಸ್ಫೋಟ : ಆರೋಪಿಗಳ ಮೇಲ್ಮನವಿಗೆ ಸುಪ್ರೀಂ ನಕಾರ

Published:
Updated:

ನವದೆಹಲಿ (ಪಿಟಿಐ) : 1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೊಳಗಾಗಿರುವ ಮೂವರು ಆರೋಪಿಗಳು ಶರಣಾಗಲು ಹೆಚ್ಚಿನ ಕಾಲಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಳ್ಳಿಹಾಕಿದೆ.ಆರೋಪಿಗಳ ಕ್ಷಮಾದಾನ ಅರ್ಜಿಯು ರಾಷ್ಟ್ರಪತಿಗಳ ಬಳಿ ಇತ್ಯರ್ಥವಾಗದೇ ಇರುವುದರಿಂದ ಗಡುವು ವಿಸ್ತರಿಸುವಂತೆ ಮಾಡಿದ ಕೋರಿಕೆಯನ್ನು ಮನ್ನಿಸಲು ಸಾಧ್ಯವಿಲ್ಲ ಎಂ ದುಅರ್ಜಿಯ ವಿಚಾರಣೆ ನಡೆಸಿದ ಅಲ್ತಮಸ್ ಕಬೀರ್ ನೇತೃತ್ವದ ನ್ಯಾಯಪೀಠವು ಸ್ಪಷ್ಟ ಪಡಿಸಿತು..ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮತ್ತು ಪತ್ರಿಕಾ ಮಂಡಲಿ ಅಧ್ಯಕ್ಷ ಮಾರ್ಕಾಂಡೇಯ ಕಟ್ಜು ಅವರು ಕಾಜಿಗೆ ಕ್ಷಮಾದಾನ ನೀಡುವಂತೆ ಮಾರ್ಚ್ 18ರಂದು ಹಾಗೂ ಇತರರಿಗೆ ಕ್ಷಮಾದಾನ ನೀಡುವಂತೆ ಏಪ್ರಿಲ್ 10ರಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು.

ಈಮಧ್ಯೆ ಶರಣಾಗತಿಗೆ ನೀಡಿರುವ ಗಡುವು ವಿಸ್ತರಿಸುವಂತೆ ಕೋರಿ ಆರೋಪಿಗಳು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ಪ್ರತಿಕ್ರಿಯಿಸಿ (+)