ಸೋಮವಾರ, ಏಪ್ರಿಲ್ 19, 2021
28 °C

ಮುಂಬೈ: ಸೂಟ್‌ಕೇಸ್‌ನಲ್ಲಿ ಯುವತಿ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ದಕ್ಷಿಣ ಮಧ್ಯ ರೈಲ್ವೆಯ ಸಂಧ್ರುಸ್ತ್ ರಸ್ತೆ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆಯಾಗಿದೆ.ಈ ಯುವತಿ 24 ರಿಂದ 26 ವರ್ಷದವಳಿರಬಹುದು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.ಯುವತಿಯ ಗುಪ್ತಾಂಗಗಳ ಮೇಲೆ ವೀರ್ಯದ ಕಲೆಗಳಿದ್ದು, ಮೃತದೇಹವಿದ್ದ ಈ ಹೊಸ ಸೂಟ್‌ಕೇಸ್ ಅನ್ನು ಪ್ಲಾಟ್‌ಫಾರ್ಮ್ ಸಂಖ್ಯೆ 1ರಲ್ಲಿ ಮಧ್ಯಾಹ್ನ 1.30ರ ಹೊತ್ತಿಗೆ ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.ರೈಲ್ವೆ ನಿಲ್ದಾಣ ಸಮೀಪದ ಕಟ್ಟಡ ಒಂದರ ನಿವಾಸಿ ವ್ಯಕ್ತಿಯೊಬ್ಬ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಸೂಟ್‌ಕೇಸ್ ಬಿಟ್ಟು ಹೋದುದನ್ನು ನೋಡಿದ್ದಾನೆ. ಬಹಳ ಹೊತ್ತಿನತನಕ ಆತ ಹಿಂತಿರುಗದಿದ್ದುದನ್ನು ಗಮನಿಸಿ ಆತ ರೈಲ್ವೆ ನಿಯಂತ್ರಣ ಕೊಠಡಿಗೆ ತಿಳಿಸಿದ ಎಂದು ಪೊಲೀಸರು ಹೇಳಿದ್ದಾರೆ.‘ಕುತ್ತಿಗೆ, ಬೆನ್ನು ಮತ್ತು ಬಲಗಣ್ಣಿನ ಮೇಲೆ ಗಾಯದ ಗುರುತುಗಳಿದ್ದು, ಸೂಟ್‌ಕೇಸ್‌ನಲ್ಲಿ ಹಾಕುವ ಮುನ್ನ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಯುವತಿಯ ಮೇಲೆ ಅತ್ಯಾಚಾರ ಎಸಗಿಲಾಗಿತ್ತೇ ಎಂಬುದು ವೈದ್ಯಕೀಯ ವರದಿ ಬಂದ ನಂತರ ಗೊತ್ತಾಗಲಿದೆ’ ಎಂದು ರೈಲ್ವೆ ಇಲಾಖೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ರಾಜ ಖಿಲ್ನಾನಿ ತಿಳಿಸಿದ್ದಾರೆ.ಕಳೆದ ವಾರ ಜುಹು ಬೀಚ್‌ನಲ್ಲಿ ಇದೇ ರೀತಿ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಆ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರೊಬ್ಬರನ್ನು ಬಂಧಿಸಿಲ್ಲ. ‘ಜುಹು ಬೀಚ್‌ನಲ್ಲಿ ನಡೆದಿರುವ ಘಟನೆಗೂ ಇದಕ್ಕೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ಆದರೆ, ಮುಂಬೈ ಪೊಲೀಸರ ಜೊತೆಗೂಡಿ ಈ ಪ್ರಕರಣಗಳ ಸಮಗ್ರ ತನಿಖೆ ನಡೆಸಿ, ಎರಡು ಘಟನೆಗಳ ನಡುವೆ ಯಾವುದಾದರೂ ಸಾಮ್ಯತೆ ಇದೆಯೇ ಎಂದು ಕಂಡುಕೊಳ್ಳಲಾಗುವುದು’ ಎಂದು ಖಿಲ್ನಾನಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.