ಮುಕ್ತವಾಗಿ ಮಾತನಾಡಿ: ಟಾಟಾ ಬ್ರಾಂಡ್‌ ಪ್ರಚಾರ

7

ಮುಕ್ತವಾಗಿ ಮಾತನಾಡಿ: ಟಾಟಾ ಬ್ರಾಂಡ್‌ ಪ್ರಚಾರ

Published:
Updated:

ಬೆಂಗಳೂರು: ಮೊಬೈಲ್‌ ಫೋನ್‌ ಸೌಲಭ್ಯಗಳನ್ನು ಪರಿಪೂರ್ಣವಾಗಿ ಬಳಸಿಕೊ ಳ್ಳುವಂತೆ ಗ್ರಾಹಕರನ್ನು ಉತ್ತೇಜಿಸಲು ‘ಮುಕ್ತವಾಗಿ ಮಾತನಾಡಿ, ಮನದ ಭಾವಗಳನ್ನು ಸಹಜವಾಗಿ ಹೊರಹಾಕಿ’ ಎಂಬ ಪ್ರಚಾರ ಕಾರ್ಯವನ್ನು ಟಾಟಾ ಡೊಕೊಮೊ ಆರಂಭಿಸಿದೆ.ಬಹಳಷ್ಟು ಜನ ಏನು ಹೇಳಬೇಕಿದೆಯೊ ಹೇಳಲಾರದೆ ಹಿಂಜರಿದು ಜೀವ ನವಿಡೀ ಕೊರಗುತ್ತಾರೆ. ಕೊನೆವರೆಗೂ ಇದು ಅವರಿಗೆ ಹೊರೆಯಾಗಿ ಬಿಡುತ್ತದೆ. ಹಾಗಾಗಿ, ಮನದ ಭಾವ ವ್ಯಕ್ತಪಡಿಸು ವಾಗ ಹಿಂಜರಿಕೆ ಬೇಡ ಎಂಬ ಸಂದೇಶ ದೊಡನೆ ಗ್ರಾಹಕರಿಗೆ ಹಿಂಜರಿಕೆ ಇಲ್ಲದೆ ಮಾತನಾಡುವಂತೆ ಉತ್ತೇಜಿಸಲು ಪ್ರಚಾರ ಆರಂಭಿಲಾಗಿದೆ ಎಂದು ಟಾಟಾ ಡೊಕೊಮೊ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಗುರಿಂದರ್ ಸಿಂಗ್ ಸಂಧು ಸುದ್ದಿಗಾರರಿಗೆ ಹೇಳಿದರು.ಕಂಪೆನಿ ಸದ್ಯ ವರಮಾನ ಲೆಕ್ಕದಲ್ಲಿ ದೇಶದ ದೂರಸಂಪರ್ಕ ಸಂಸ್ಥೆಗಳಲ್ಲಿ ೪ನೇ ಸ್ಥಾನದಲ್ಲಿದೆ. ಕಡಿಮೆ ದರದ ಸೇವೆ ಗಳನ್ನು ಹೆಚ್ಚು ಪರಿಚಯಿಸುವ ಮೂಲಕ ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry