ಮಂಗಳವಾರ, ಮೇ 11, 2021
28 °C

ಮುಕ್ತೇಶ್ವರದ ಬೆಟ್ಟ ಸಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದು ಯಾತ್ರಾ ಸ್ಥಳ ಮಾತ್ರವಲ್ಲ ಗಿರಿಶೃಂಗಗಳಿಂದ ಆವರಿಸಿರುವ ಅದ್ಭುತ ಪ್ರವಾಸಿ ತಾಣ ಕೂಡ. ಉತ್ತರಾಂಚಲ ರಾಜ್ಯದ ಮುಕ್ತೇಶ್ವರ ಹೆಸರಿನ ಈ ಪುಟ್ಟ ಪಟ್ಟಣ ತನ್ನ ಪ್ರಾಕೃತಿಕ ಸೊಬಗಿನಿಂದ ಹೆಸರುವಾಸಿಯಾಗಿದೆ.ಅಲ್ಲಿ 350 ವರ್ಷಗಳಷ್ಟು ಹಳೆಯದಾದ ಮುಕ್ತೇಶ್ವರ ದೇವಾಲಯ ಇದೆ. ಅದಕ್ಕೊಂದು ಪೌರಾಣಿಕ ಹಿನ್ನೆಲೆ ಇದೆ. ಸಂತನಾಗಿದ್ದ ಶ್ರೀಮುಕ್ತೇಶ್ವರ ಮಹಾರಾಜಜೀ ಅಲ್ಲಿ ಧ್ಯಾನ ಮಾಡುತ್ತಿದ್ದ ಕಾರಣ ಆ ಜಾಗಕ್ಕೆ ಈ ಹೆಸರು ಪ್ರಾಪ್ತವಾಗಿದೆ. ಗರ‌್ಹವಾಲ್ ಬೆಟ್ಟ ಸಾಲುಗಳಲ್ಲಿ ಇರುವ ಈ ಮುಕ್ತೇಶ್ವರ ಸಮುದ್ರ ಮಟ್ಟದಿಂದ 2286 ಮೀಟರ್ ಎತ್ತರದಲ್ಲಿದೆ.ಹಣ್ಣಿನ ಮರಗಳ ಸುವಾಸನೆ, ಕಾಡು ವೃಕ್ಷಗಳ ಸಾಲು ಆಹ್ಲಾದಕರ ಅನುಭವ ನೀಡುತ್ತದೆ. ಹಣ್ಣಿನ ಮರಗಳ ನಡುವೆ ಸಾಗುತ್ತಿದ್ದಂತೆಯೇ ಆಲೂಗಡ್ಡೆ ತೋಟಗಳ ಮನ ಸೆಳೆಯುತ್ತವೆ. ಮುಂಜಾನೆ ಮತ್ತು  ಮುಸ್ಸಂಜೆಯ ಅದ್ಭುತವಾದ ರಮ್ಯನೋಟ ಸವಿಯಲು ಪ್ರವಾಸಿಗರ ಹಿಂಡು ಇಲ್ಲಿಗೆ ಬರುತ್ತದೆ.

 

ಆ ಬೆಟ್ಟ ಸಾಲುಗಳಲ್ಲಿ ಗುರುತಿಸಲಾಗಿರುವ ನಂದಾ ದೇವಿ ಪೀಕ್‌ನಲ್ಲಿ ಸೂರ್ಯೋದಯ ಸೂರ್ಯಾಸ್ತ ನೋಡಬಹುದು. ನೈನಿತಾಲ್‌ನಿಂದ 51 ಕಿಮೀ ದೂರದಲ್ಲಿ ಇರುವ ಈ ತಾಣದಲ್ಲಿ ಸಾಹಸ ಕ್ರೀಡೆಗಳನ್ನಾಡಲು ಅವಕಾಶ ಇದೆ.ಬಂಡೆ ಏರುವುದು, ಪಕ್ಷಿ ವೀಕ್ಷಣೆ, ವನ್ಯಜೀವಿಗಳ ವೀಕ್ಷಣೆ ಮಾತ್ರವಲ್ಲ ಸೋಲಾರ್ ವಿದ್ಯುತ್ ಬಳಸಿದ ಉದ್ಯಾನ ಕೂಡ ಇಲ್ಲಿದೆ. ವಸಂತ ಮತ್ತು ಆಷಾಢ ಮಾಸ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಬ್ರಿಟೀಷರ ಕಾಲದ ಕಟ್ಟಡಗಳು ಮತ್ತು ಸ್ಮಾರಕಗಳು ಊರಿಗೆ ವಿಶಿಷ್ಟ ಅಂದ ನೀಡಿವೆ.ಹತ್ತಿರದಲ್ಲಿಯೇ ಇರುವ ಚೌಲಿ ಜಲಿ, ವೆಟರಿನರಿ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಲೇಬೇಕು. ಕ್ಯಾಂಡಲ್, ವುಡಲ್ ಶಾಲ್, ಮಫ್ಲರ್‌ಗಳು ಇಲ್ಲಿ ಪ್ರವಾಸಿಗರು ಕೊಂಡುಕೊಳ್ಳಲು ಇಚ್ಛಿಸುವ ವಸ್ತುಗಳು.ಇಲ್ಲಿಗೆ ಪಂಥನಗರ ಹತ್ತಿರದ ವಿಮಾನ ನಿಲ್ದಾಣ, ಕಥಗೊಡಮ್ 65 ಕಿಮೀ ದೂರ ಇರುವ ರೈಲ್ವೆ ನಿಲ್ದಾಣ. ಇನ್ನು ಇಲ್ಲಿಗೆ ಧರ್ಮಸಾಲಾ, ದೆಹಲಿ, ಮೊರಾದಾಬಾದ್, ಡಾಲ್‌ಹೌಸಿಯಿಂದ ಸಾಕಷ್ಟು ಬಸ್ ಸಂಪರ್ಕ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.