ಮುಕ್ತ ವಿ.ವಿ. ಕುಲಪತಿಗೆ ರಾಜ್ಯಪಾಲರ ಸೂಚನೆ

7

ಮುಕ್ತ ವಿ.ವಿ. ಕುಲಪತಿಗೆ ರಾಜ್ಯಪಾಲರ ಸೂಚನೆ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನೇಮ­ಕಾತಿ­­ಯಲ್ಲಿ ನಡದಿದೆ ಎನ್ನಲಾದ ಅವ್ಯವ­ಹಾರಗಳ ಕುರಿತು ತನಿಖೆಗೆ ಆದೇಶಿಸುವಂತೆ ಕೋರಿ ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವದ ಕುರಿತು ಪ್ರತಿಕ್ರಿಯೆ ನೀಡುವಂತೆ ರಾಜ್ಯ­ಪಾಲರು ಮುಕ್ತ ವಿ.ವಿ ಕುಲಪತಿಗೆ ಸೂಚಿಸಿದ್ದಾರೆ.ಮುಕ್ತ ವಿ.ವಿ ಬೋಧಕರ ಹುದ್ದೆಗಳ ಭರ್ತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ವಿಧಾನಮಂಡಲ ಅಧಿವೇಶನದಲ್ಲೇ ಕೆಲವು ಶಾಸಕರು ಈ ವಿಷಯ ಪ್ರಸ್ತಾಪಿಸಿದ್ದರು. ಈ ಬಗ್ಗೆ ತನಿಖೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಿತ್ತು.ತನಿಖೆಗೆ ಆದೇಶಿಸುವ ಸಂಬಂಧ ಇತ್ತೀಚೆಗೆ ರಾಜ್ಯಪಾಲರಿಗೆ ಸರ್ಕಾರ ಕಡತ ರವಾನಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಅವರು ಮುಕ್ತ ವಿ.ವಿ ಕುಲಪತಿ ಎಂ.ಜಿ.ಕೃಷ್ಣನ್‌ ಅವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry