ಮುಖಕ್ಷೌರಕ್ಕೆ ತಾರೆಗಳ ಚಮಕ್

7

ಮುಖಕ್ಷೌರಕ್ಕೆ ತಾರೆಗಳ ಚಮಕ್

Published:
Updated:
ಮುಖಕ್ಷೌರಕ್ಕೆ ತಾರೆಗಳ ಚಮಕ್

ನಟ, ರೂಪದರ್ಶಿ ಆರ್.ಮಾಧವನ್ ಮತ್ತು ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ ನಗರದ ಸ್ಯಾಂಕಿ ರಸ್ತೆಯ ಪಂಚತಾರಾ ಹೋಟೆಲೊಂದಕ್ಕೆ ಬಂದಿದ್ದರು. ಜಿಲೆಟ್ ಇಂಡಿಯಾ ನಡೆಸುತ್ತಿರುವ ಶೇವ್ ಇಂಡಿಯಾ ಅಭಿಯಾನದಲ್ಲಿ ಪಾಲ್ಗೊಳ್ಳಲು...ಕುರುಚಲು ಗಡ್ಡಕ್ಕಿಂತ ಪೂರ್ಣ ಮುಖಕ್ಷೌರ ಮಾಡಿಕೊಂಡ ಪುರುಷನನ್ನು ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ. ಸಮೀಕ್ಷೆಗಳೂ ಇದನ್ನು ದೃಢಪಡಿಸಿವೆ ಎಂದು ಹೇಳುತ್ತಲೇ ಮಾಧವನ್ ಮುಖಕ್ಕೆ ಶೇವಿಂಗ್ ಜೆಲ್ ಹಚ್ಚಿಕೊಂಡರು. ಹೌದು ಹೌದು ಎನ್ನುತ್ತ ಈ ಮಾತಿಗೆ ದನಿಗೂಡಿಸಿದ ರಾಧಿಕಾ ಶೇವಿಂಗ್ ರೇಜರ್ ಹಿಡಿದು ಹುಸಿ ನೋಟ ಬೀರುತ್ತಲೇ ಮಾಧವನ್‌ಗೆ ಕೊಂಚ ಶೇವ್ ಮಾಡಿದರು. ಅಷ್ಟಾಗುತ್ತಿದ್ದಂತೆ ಚಪ್ಪಾಳೆ, ಹೋ ಎಂಬ ಹರ್ಷೋದ್ಘಾರದ ಸುರಿಮಳೆ.ಇದರ ಜತೆಯಲ್ಲೇ ಮಾಧವನ್ ಜಿಲೆಟ್‌ನ ಮ್ಯಾಕ್ 3 ಟರ್ಬೊ ಸೆನ್ಸಿಟಿವ್ ರೇಜರ್ ಬಿಡುಗಡೆ ಮಾಡಿದರು. ನಿತ್ಯ ಬಳಸಲು ಯೋಗ್ಯವಾಗಿದೆ ಎಂದು ಹೇಳುತ್ತ ನೀಟಾಗಿ ಶೇವ್ ಮಾಡಿಕೊಂಡರು.ಆಕರ್ಷಕವಾಗಿ ಅಲಂಕರಿಸಿಕೊಳ್ಳುವ ಪುರುಷರಲ್ಲಿ ಅನೇಕರು ಮುಖ ಕ್ಷೌರದ ಬಗ್ಗೆ ಅಷ್ಟಾಗಿ ಗಮನ ಕೊಡುವುದೇ ಇಲ್ಲ. ಆದರೆ ಕುರುಚಲು ಗಡ್ಡವಿಲ್ಲದ ಮುಖ ಅವರ ವ್ಯಕ್ತಿತ್ವ ಹೆಚ್ಚಿಸುತ್ತದೆ, ಹುಡುಗಿಯರ ಕಣ್ಣಲ್ಲೂ ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ ಎನ್ನುತ್ತಲೇ, ವ್ಯಾಲೆಂಟೈನ್ ಡೆ ಹತ್ತಿರ ಬರುತ್ತಿದೆ.ತಮ್ಮ ಮನದನ್ನೆಯನ್ನು ಮೆಚ್ಚಿಸಲು ಬಯಸುವ ಹುಡುಗರು ಇದನ್ನು ಲಕ್ಷ್ಯದಲ್ಲಿ ಇಟ್ಟುಕೊಳ್ಳುವುದು ಒಳಿತು ಎಂದು ರಾಧಿಕಾ ಕಿವಿಮಾತು ಹೇಳಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry