ಬುಧವಾರ, ಜನವರಿ 22, 2020
28 °C

ಮುಖದ ಅಂದಕ್ಕೆ ಪಂಚ ಸೂತ್ರ

– ಆರ್. ಎಸ್‌. Updated:

ಅಕ್ಷರ ಗಾತ್ರ : | |

ಮುಖದ ಅಂದಕ್ಕಾಗಿ ಫೇಶಿಯಲ್‌ಗೆ ಮೂವತ್ತು ವರ್ಷಗಳ ನಂತರ ಜೀವನಶೈಲಿಯಲ್ಲಿ ಒಂದು ಸ್ಥಾನ ಕಲ್ಪಿಸಲೇಬೇಕು. ಈ ದಿನಗಳಲ್ಲಿ ಹೊಳಪು, ನುಣುಪಿನ ಚರ್ಮಕ್ಕೆ ಸ್ವಲ್ಪ ಮಟ್ಟಿನ ಆರೈಕೆ ಬೇಕೇಬೇಕು. ಧಾವಂತದ ಬದುಕಿನಲ್ಲಿ ನಮ್ಮ ಅಂದ–ಚೆಂದಕ್ಕೆ ಮಾತ್ರ ಮಹತ್ವ ನೀಡಿದರೆ ಸಾಲದು. ಪ್ರಸಾಧನಗಳು ಕೇವಲ ಮುಖದ ಮೇಲೊಂದು ಮುಖವಾಡವನ್ನು ತರಬಹುದೇ ಹೊರತು ಲವಲವಿಕೆಯನ್ನಲ್ಲ.

ಚರ್ಮದ ಜೀವಂತಿಕೆಗಾಗಿ ಫೇಶಿಯಲ್‌ ಅಗತ್ಯವಾಗುತ್ತದೆ ಎನ್ನುವುದು ‘ಗ್ರೀನ್‌ ಟ್ರೆಂಡ್ಸ್‌’ ಸಲೂನ್‌ನ ಸೌಂದರ್ಯ ತಜ್ಞೆ ಕರಪಗಮ್‌ ಅವರ ಅಭಿಪ್ರಾಯ.

ಈಚೆಗೆ ‘ಗ್ರೀನ್‌ ಟ್ರೆಂಡ್ಸ್‌’ನಲ್ಲಿ ಹೊಸ ಬಗೆಯ ಮೂರು ಫೇಶಿಯಲ್‌ ಸೇವೆಯನ್ನು ಆರಂಭಿಸಿದ ಸಂದರ್ಭದಲ್ಲಿ ಅವರು ಈ ಫೇಶಿಯಲ್‌ಗಳ ವಿಶೇಷ ಮತ್ತು ಅವಶ್ಯಗಳನ್ನು ವಿವರಿಸಿದರು.ಆರೋಗ್ಯಕ್ಕೆ ಮತ್ತು ಅಂದಕ್ಕೆ ಚರ್ಮವನ್ನು ಆಳದಲ್ಲಿ ಸ್ವಚ್ಛಗೊಳಿಸಲೇಬೇಕು. ಚರ್ಮದ ಸತ್ತ ಜೀವಕೋಶಗಳನ್ನು ಆಗಾಗ ನಿವಾರಿಸಿಕೊಳ್ಳಬೇಕು. ಹವಾಮಾನದಿಂದಾಗಿ ಅಥವಾ ಸುದೀರ್ಘ ಕಾಲ ಕಂಪ್ಯೂಟರ್‌ ಮುಂದೆ ಕೆಲಸ ಮಾಡುವುದರಿಂದ, ವಾತಾನುಕೂಲಿ ವಾತಾವರಣದಲ್ಲಿ ಹೆಚ್ಚು ಕಾಲ ಕಳೆಯುವುದರಿಂದ, ವಯೋಸಹಜ ಕಾರಣದಿಂದ ಮತ್ತು ಅಪೌಷ್ಟಿಕಾಂಶದಿಂದಲೂ ನಿಮ್ಮ ಚರ್ಮ ಕಳಾಹೀನವಾಗಬಹುದು.ಮೂವತ್ತು ದಿನಗಳಿಗೆ ಒಮ್ಮೆ ಚರ್ಮದ ಜೀವಕೋಶಗಳು ತಮ್ಮ  ಜೀವಿತಾವಧಿಯನ್ನು ಪೂರೈಸುವುದರಿಂದ ತಿಂಗಳಿಗೆ ಒಮ್ಮೆಯಾದರೂ ಫೇಶಿಯಲ್‌ ಅತ್ಯಗತ್ಯ ಎನ್ನುತ್ತಾರೆ ಅವರು. ‘ಗ್ರೀನ್‌ಟ್ರೆಂಡ್ಸ್‌’ ಸಲೂನ್‌ನಲ್ಲಿ ಹೊಸತಾಗಿ ಪರಿಚಯಿಸಿದ ಫೇಶಿಯಲ್‌ನಲ್ಲಿ ‘ವೈಟ್‌ ಸ್ಪಾರ್ಕಲ್‌’ ಸಹ ಒಂದು. ಈ ಫೇಶಿಯಲ್‌ ದಣಿದ ಚರ್ಮಕ್ಕೆ ಮರುಜೀವ ಕೊಡುತ್ತದೆ ಎಂಬ ಭರವಸೆ ಅವರದ್ದು.

ತಾಜಾ ಹಣ್ಣಿನ ತಿರುಳು ಚರ್ಮಕ್ಕೆ ಕಾಂತಿ ನೀಡುವ ಕೆಲಸವನ್ನು ಮಾಡುತ್ತದೆ. ಮುಖದ ಮೇಲೆ ಬರುವ ಪುಟ್ಟ ಕಪ್ಪುಕಲೆಗಳನ್ನು ಮೃದುಗೊಳಿಸಿ, ಅವನ್ನು ತೆಗೆಯುವ ಪ್ರಕ್ರಿಯೆಯನ್ನು ನೋವುರಹಿತಗೊಳಿಸುತ್ತದೆ. ಚರ್ಮಕ್ಕೆ ತೇವಾಂಶ ನೀಡುವಂತೆ ವೈಜ್ಞಾನಿಕವಾಗಿ ಈ ಫೇಶಿಯಲ್‌ ಅನ್ನು ವಿನ್ಯಾಸಗೊಳಿಸಲಾಗಿದೆ.‘ಗ್ಲೋ ರೇಡಿಯನ್ಸ್‌’ನಲ್ಲಿ ಎಲ್ಲ ಬಗೆಯ ಚರ್ಮಕ್ಕೂ ಹೊಂದುವಂಥ ಚಿಕಿತ್ಸಕ ಪ್ರಕ್ರಿಯೆಯನ್ನು ಅಳವಡಿಸಲಾಗಿದೆ. ಚರ್ಮವು ಕಾಂತಿಯುತವಾಗಿಯೂ ಬಿಗಿಯಾಗಿಯೂ ಕಾಣಿಸಿಕೊಳ್ಳುತ್ತದೆ. ಫಲಿತಾಂಶವೂ ಕೂಡಲೇ ಕಾಣುವುದರಿಂದ ಮದುಮಕ್ಕಳಿಗೆ ಹೇಳಿ ಮಾಡಿಸದಂಥ ಫೇಶಿಯಲ್‌ ಇದು ಎನ್ನುವ ಶಿಫಾರಸ್ಸು ಕರಪಗಮ್‌ ಅವರದ್ದು.ಬ್ರೈಟ್‌ ಎನ್‌ ಶೈನ್‌

ಇದನ್ನು ಅತಿ ಸೂಕ್ಷ್ಮ ಚರ್ಮಕ್ಕಾಗಿ ಎಂದೇ ವಿನ್ಯಾಸಗೊಳಿಸಲಾಗಿದೆ. ಈ ವಿಶೇಷ ಮಸಾಜ್‌ ಬಣ್ಣಗೆಟ್ಟ ಚರ್ಮದ ಭಾಗವನ್ನು ತಿಳಿಗೊಳಿಸುತ್ತದೆ. ನಿಗದಿತ ಮತ್ತು ನಿಯಮಿತ ಬಳಕೆಯಿಂದಾಗಿ ಚರ್ಮವು ತನ್ನ ಮೂಲ ಬಣ್ಣವನ್ನು ಪಡೆಯಬಹುದಾಗಿದೆ.

 ಚರ್ಮದ ಕಾಂತಿಗಾಗಿ ಮತ್ತು ಆರೋಗ್ಯಕ್ಕಾಗಿ ಈ ಫೇಶಿಯಲ್‌ಗಳು ಅತ್ಯಗತ್ಯವಾಗಿವೆ. ತಿಂಗಳಿಗೆ ಒಮ್ಮೆಯಾದರೂ ಒಂದಷ್ಟು ಹೊತ್ತು ತಮಗಾಗಿಯೇ ಎಂದು ಆರೋಗ್ಯ ಹಾಗೂ ಕಾಂತಿಯುಕ್ತ ಮುಖ ಸಿಗುತ್ತದೆ ಎನ್ನುವ ಸಲಹೆ ಅವರದ್ದು.ಮುಖದ ಅಂದಕ್ಕೆ ಹಲವು ಸೂತ್ರಗಳು

ಸಿಟಿಎಂಎಸ್‌: ಪ್ರತಿದಿನವೂ ಮುಖ ತೊಳೆಯುವಾಗ ಒಂದಷ್ಟು ಗಳಿಗೆಗಳನ್ನು ಮೀಸಲಿಡಿ. ಶುದ್ಧಗೊಳಿಸಲು, ಟೋನ್‌ ಮಾಡಲು, ಮಾಯಿಶ್ಚರೈಸರ್‌ ಲೇಪಿಸಲು ಮತ್ತು ಹೊರಹೋಗುವ ಮುನ್ನ ಸನ್‌ಸ್ಕ್ರೀನ್‌ ಲೋಷನ್‌ ಲೇಪಿಸಕೊಳ್ಳಲು. ಈ ಎಲ್ಲ ಹಂತಗಳನ್ನು ಸಿಟಿಎಂಎಸ್‌ ಎಂದು ಕರೆಯಲಾಗುತ್ತದೆ.ಮೇಕಪ್‌ ತೊಳೆಯಿರಿ

ಪ್ರತಿದಿನವೂ ಮಲಗುವ ಮುನ್ನ ಮುಖದ ಮೇಲಿನ ಮೇಕಪ್‌ ತೆಗೆಯಲು ಮರೆಯದಿರಿ. ಇದರಿಂದ ಮುಖದ ಜೀವಕೋಶದ ರಂಧ್ರಗಳು ಉಸಿರಾಟಕ್ಕೆ ತೆರೆದುಕೊಳ್ಳಲು ಅನುಕೂಲವಾಗಲಿದೆ.ಹೆಚ್ಚು ನೀರು ಕುಡಿಯಿರಿ

ದಿನಕ್ಕೆ ಕನಿಷ್ಠ ಎಂಟು ಲೀಟರ್‌ನಷ್ಟು ನೀರನ್ನು ಕುಡಿಯಿರಿ. ನಿಮ್ಮ ಆಹಾರ ಅಭ್ಯಾಸದಲ್ಲಿ ಸಾಧ್ಯವಿದ್ದಷ್ಟು ಜ್ಯೂಸ್‌, ಸೂಪ್‌ ಮುಂತಾದವುಗಳನ್ನು ಸೇರಿಸಿ.ನಿದ್ದೆ

ಪ್ರತಿದಿನವೂ ಕನಿಷ್ಠ 7 ಗಂಟೆ ಸುಖ ನಿದ್ದೆ ನಿಮ್ಮದಾಗುವಂತೆ ದಿನಚರಿಯನ್ನು ರೂಪಿಸಿಕೊಳ್ಳಿ. ನಿದ್ದೆಯು ಚೈತನ್ಯ ನೀಡುವುದರಿಂದ ಚರ್ಮದ ಆರೋಗ್ಯ ರಕ್ಷಣೆ ಮಾಡುತ್ತದೆ. ಇಷ್ಟಕ್ಕೂ ನಾವು ಏನು ಎನ್ನುವುದಕ್ಕಿಂತಲೂ ನಾವು ಹೇಗೆ ಕಾಣುತ್ತೇವೆ ಎನ್ನುವುದೇ ಮುಖ್ಯವಾಗುತ್ತಿರುವ ಈ ದಿನಗಳಲ್ಲಿ ಫೇಶಿಯಲ್‌ಗಳು ಮುಖದ ಅಂದಕ್ಕೆ ಹೊಸತನ ತರಬಹುದು.

ವ್ಯಾಯಾಮ

ಪ್ರತಿದಿನವೂ ಹಗುರವಾದ ವ್ಯಾಯಾಮ ಮಾಡಿ. ಬೊಜ್ಜಿನಿಂದಾಗಿಯೂ ಚರ್ಮ ಕಳೆಗುಂದುತ್ತದೆ.

ಸಮತೋಲಿತ ಆಹಾರ

ಊಟದಲ್ಲಿ ಹೆಚ್ಚು ಪ್ರೊಟೀನ್‌, ವಿಟಮಿನ್‌ಗಳಿರುವಂತೆ ನೋಡಿಕೊಳ್ಳಿ. ಆಗಾಗ ಮನೆಯಲ್ಲಿಯೇ ಮುಖಕ್ಕೆ ಕೆಲವು ಫೇಸ್‌ಪ್ಯಾಕ್‌ಗಳನ್ನು ಲೇಪಿಸಿ.

ಕಡಲೆಹಿಟ್ಟು–ಮೊಸರು–ಅರಿಶಿನದ ಮಿಶ್ರಣ, ಅಕ್ಕಿಹಿಟ್ಟು–ಸೌತೆಕಾಯಿ ಮಿಶ್ರಣ ಮುಂತಾದವುಗಳನ್ನು ಪ್ರಯತ್ನಿಸಬಹುದು.

ಪ್ರತಿಕ್ರಿಯಿಸಿ (+)