ಶನಿವಾರ, ಏಪ್ರಿಲ್ 17, 2021
22 °C

ಮುಖರ್ಜಿ, ಸಂಗ್ಮಾ ನಾಮಪತ್ರ ಸ್ವೀಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ರಾಷ್ಟ್ರಪತಿ ಸ್ಥಾನಕ್ಕೆ  ಸ್ಪರ್ಧಿಸಿರುವ ಯುಪಿಎ ಅಭ್ಯರ್ಥಿ ಪ್ರಣವ್ ಮುಖರ್ಜಿ ಹಾಗೂ  ಎನ್‌ಡಿಎ, ಬಿಜೆಡಿ, ಎಐಎಡಿಎಂಕೆ  ಬೆಂಬಲಿತ ಅಭ್ಯರ್ಥಿ ಪಿ.ಎ. ಸಂಗ್ಮಾ ಅವರು ಸಲ್ಲಿಸಿದ್ದ ನಾಮಪತ್ರ ಮಂಗಳವಾರ ಸ್ವೀಕೃತವಾಗಿದ್ದು ಈ  ಮೂಲಕ ರಾಷ್ಟ್ರಪತಿ ಚುನಾವಣೆಗೆ ಅಖಾಡ ಸಿದ್ಧವಾಗಿದೆ.`ಭಾರತೀಯ ಸಾಂಖ್ಯಿಕ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಪ್ರಣವ್ ರಾಜೀನಾಮೆ ಸಲ್ಲಿಸಿರುವುದು ಕಾನೂನು ಬದ್ಧ ವಾಗಿದ್ದು~ ಪ್ರಣವ್ ಅವರ ನಾಮಪತ್ರ ಸ್ವೀಕೃತವಾಗಿದೆ ಎಂದು ಮುಖರ್ಜಿ ಅವರ ಚುನಾವಣಾ ಏಜೆಂಟ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬನ್ಸಾಲ್ ಹೇಳಿದ್ದಾರೆ.   ಪ್ರಣವ್ ಹಾಗೂ ಸಂಗ್ಮಾ ಅವರು ಸಲ್ಲಿಸಿರುವ ನಾಮಪತ್ರ ಹಾಗೂ ಸಂಬಂಧಿತ ದಾಖಲೆಗಳು ಸರಿಯಾಗಿವೆ ಎಂದು  ಚುನಾವಣಾಧಿಕಾರಿಯಾಗಿರುವ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ  ವಿ.ಕೆ. ಅಗ್ನಿ ಹೋತ್ರಿ ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.