ಮುಖೇಶ್ ಸಂಪತ್ತು 10.20 ಲಕ್ಷ ಕೋಟಿ

7

ಮುಖೇಶ್ ಸಂಪತ್ತು 10.20 ಲಕ್ಷ ಕೋಟಿ

Published:
Updated:

ನವದೆಹಲಿ(ಐಎಎನ್‌ಎಸ್): 1930 ಕೋಟಿ ಡಾಲರ್(ರೂ10.20 ಲಕ್ಷ ಕೋಟಿ) ವೈಯಕ್ತಿಕ ಸಂಪತ್ತಿನ ಒಡೆಯ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅತ್ಯಂತ ಶ್ರೀಮಂತ ಭಾರತೀಯ ಎಂದು ಚೀನಾ ಮೂಲದ  ಸಂಶೋಧನಾ ಸಂಸ್ಥೆ `ಹ್ಯೂರನ್~ ಸಮೀಕ್ಷಾ ವರದಿ ಹೇಳಿದೆ.`ಹ್ಯೂರನ್~ ಪ್ರಕಟಿಸಿರುವ `ಭಾರತೀಯ  ಶ್ರೀಮಂತರ~ ಪಟ್ಟಿಯಲ್ಲಿ 1690 ಕೋಟಿ ಡಾಲರ್(ರೂ 8.93 ಲಕ್ಷ ಕೋಟಿ) ಸಂಪತ್ತು ಹೊಂದಿರುವ ಅರ್ಸೆಲರ್ ಮಿತ್ತಲ್ ಕಂಪೆನಿ ಅಧ್ಯಕ್ಷ ಎಲ್.ಎನ್.ಮಿತ್ತಲ್ 2ನೇ ಸ್ಥಾನದಲ್ಲಿ, ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಮತ್ತು ಸನ್ ಫಾರ್ಮಾಸ್ಯುಟಿಕಲ್ಸ್‌ನ ದಿಲೀಪ್ ಸಾಂಘ್ವಿ 3 ಮತ್ತು 4ನೇ  ಸ್ಥಾನದಲ್ಲಿದ್ದಾರೆ. ಇವರಿಬ್ಬರ ಸಂಪತ್ತು ಕ್ರಮವಾಗಿ 1230 ಕೋಟಿ ಡಾಲರ್ (್ಙ6.5 ಲಕ್ಷ ಕೋಟಿ) ಮತ್ತು 850 ಕೋಟಿ ಡಾಲರ್ (ರೂ 4.4 ಲಕ್ಷ ಕೋಟಿ) ಇದೆ.ಟಾಟಾ ಸಮೂಹದಲ್ಲಿ ಗರಿಷ್ಠ ಷೇರು ಹೊಂದಿರುವ ಶಾಪೂರ್ಜಿ ಪಲ್ಲೊಂಜಿ ಅಂಡ್ ಕಂಪೆನಿಯ ಪಲ್ಲೊಂಜಿ ಮಿಸ್ತ್ರಿ (79 ಲಕ್ಷ ಡಾಲರ್- ರೂ 4.17 ಲಕ್ಷ ಕೋಟಿ), ಎಸ್ಸಾರ್ ಎನರ್ಜಿ ಕಂಪೆನಿಯ ಶಶಿ ಮತ್ತು ರವಿ ರುಯಾ (720 ಕೋಟಿ ಡಾಲರ್-ರೂ 3.8 ಲಕ್ಷ ಕೋಟಿ) ಮತ್ತು ಗೊದ್ರೇಜ್ ಸಮೂಹದ ಆದಿ ಗೊದ್ರೇಜ್ (690 ಕೋಟಿ ಡಾಲರ್-   ರೂ 3.64 ಲಕ್ಷ ಕೋಟಿ) ನಂತರದ ಸ್ಥಾನಗಳಲ್ಲಿದ್ದಾರೆ.`ಹ್ಯೂರನ್~ನ 10 ಅಗ್ರ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ `ಡಿಎಲ್‌ಎಫ್~ನ ಕುಶಾಲ್ ಪಾಲ್ ಸಿಂಗ್ (630 ಕೋಟಿ ಡಾಲರ್-3.33 ಲಕ್ಷ ಕೋಟಿ) ಮತ್ತು ಗ್ರಾಸಿಂ ಇಂಡಸ್ಟ್ರೀಸ್‌ನ ಕುಮಾರ ಮಂಗಳಂ ಬಿರ್ಲಾ (580 ಕೋಟಿ ಡಾಲರ್-3.06ಲಕ್ಷ ಕೋಟಿ), `ಎಚ್‌ಸಿಎಲ್~ಶಿವನಾಡಾರ್ (570 ಕೋಟಿ ಡಾಲರ್-3.01 ಲಕ್ಷ ಕೋಟಿ) ಮತ್ತು ಭಾರ್ತಿ ಏರ್‌ಟೆಲ್‌ನ ಸುನಿಲ್ ಮಿತ್ತಲ್(570 ಕೋಟಿ ಡಾಲರ್-3.01 ಲಕ್ಷ ಕೋಟಿ) ಸ್ಥಾನ ಪಡೆದಿದ್ದಾರೆ. ಈ ಎಲ್ಲ ಸಾಧಕರಲ್ಲಿ ಶೇ 62ರಷ್ಟು ಉದ್ಯಮಿಗಳು ಸ್ವಂತ ದುಡಿಮೆ ಯಿಂದ ಸಂಪತ್ತು ಹೆಚ್ಚಿಸಿ ಕೊಂಡಿದ್ದಾ ರೆಂದು `ಹ್ಯೂರನ್~ ಹೇಳಿದೆ.ಒ.ಪಿ.ಜಿಂದಾಲ್ ಸಮೂಹದ ಕಾರ್ಯನಿರ್ವಾಹಕೇತರ ಅಧ್ಯಕ್ಷೆ ಸಾವಿತ್ರಿ ಜಿಂದಾಲ್ ಅಗ್ರ ಭಾರತೀಯ ಶ್ರೀಮಂತೆ. ಸಾವಿತ್ರಿ ಜಿಂದಾಲ್ ಅವರ ವೈಯಕ್ತಿಕ ಆಸ್ತಿ 560 ಕೋಟಿ ಡಾಲರ್ (ರೂ 2.96 ಲಕ್ಷ ಕೋಟಿ). ಎರಡನೇ ಸ್ಥಾನದಲ್ಲಿ ಬೆನೆಟ್ ಅಂಡ್ ಕೋಲ್ಮನ್ ಸಂಸ್ಥೆಯ ಇಂದು ಜೈನ್(170 ಕೋಟಿ ಡಾಲರ್) ಥರ್‌ಮ್ಯಾಕ್ಸ್‌ನ ಅನು ಆಗಾ (69 ಕೋಟಿ ಡಾಲರ್, ಬಯೋಕಾನ್‌ನ ಕಿರಣ್ ಮಜುಂದಾರ್ ಷಾ (60 ಕೋಟಿ ಡಾಲರ್) ಹಿಂದೂಸ್ತಾನ್ ಟೈಮ್ಸನ ಶೋಭನಾ ಭಾರ್ತಿಯಾ (49 ಕೋಟಿ  ಡಾಲರ್) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.100 ಅಗ್ರ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಶೇ 36ರಷ್ಟು ಉದ್ಯಮಿಗಳು ಮುಂಬೈನವರು, ಶೇ 15ರಷ್ಟು ಮಂದಿ  ಬೆಂಗಳೂರಿನವರು. ವಿಶೇಷವೆಂದರೆ ಇವರಲ್ಲಿ ಕಿರಣ್ ಮಜುಂದಾರ್ ಷಾ ಒಬ್ಬರೇ ಸ್ವಂತ ದುಡಿಮೆ ಮೇಲೆ ಸಂಪತ್ತು ವೃದ್ಧಿಸಿಕೊಂಡ ಸಾಧಕಿ ಎಂದು `ಹ್ಯೂರನ್~ ಬಣ್ಣಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry