ಶನಿವಾರ, ಮೇ 28, 2022
26 °C

ಮುಖ್ದೂಮ್ ಶಹಾಬುದ್ದೀನ್ ವಿರುದ್ಧ ಬಂಧನ ವಾರೆಂಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಇಸ್ಲಾಮಾಬಾದ್ (ಪಿಟಿಐ):  ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರ ಅನರ್ಹತೆಯಿಂದ ತೆರವಾಗಿರುವ ಪಾಕಿಸ್ತಾನದ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಅಭ್ಯರ್ಥಿ ಹಾಗೂ ಪಕ್ಷದ ಹಿರಿಯ ನಾಯಕ ಮುಖ್ದೂಮ್ ಶಹಾಬುದ್ದೀನ್ ಅವರ ವಿರುದ್ಧ ರಾವಲ್ಪಿಂಡಿಯ ವಿಶೇಷ ನ್ಯಾಯಾಲಯವು ಗುರುವಾರ ಹಗರಣ ಒಂದಕ್ಕೆ ಸಂಬಂಧಿಸಿದಂತೆ ಬಂಧನ ವಾರೆಂಟ್ ಜಾರಿಗೊಳಿಸಿದೆ.ಸುಪ್ರೀಂಕೋರ್ಟ್ ಮಂಗಳವಾರವಷ್ಟೇ ಗಿಲಾನಿ ಅವರನ್ನು ಅನರ್ಹಗೊಳಿಸಿತ್ತು ಈ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯನ್ನಾಗಿ ಪಕ್ಷದ ಹಿರಿಯ ನಾಯಕ ಮುಖ್ದೂಮ್ ಶಹಾಬುದ್ದೀನ್ ಅವರನ್ನು ಪ್ರಧಾನಿ ಮಾಡಬೇಕೆಂದು ಪಿಪಿಪಿ ನಿರ್ಧಾರ ಕೈಗೊಂಡಿತ್ತು.ಮುಖ್ದೂಮ್ ಶಹಾಬುದ್ದೀನ್ ಅವರು ಆರೋಗ್ಯ ಮಂತ್ರಿಯಾಗಿದ್ದ ತಮ್ಮ ಅಧಿಕಾರದ ಅವಧಿಯಲ್ಲಿ ನಿಯಂತ್ರಿತ ಎಪಿಡ್ರೈನ್ ಔಷಧ ಆಮದಿನಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ರಾವಲ್ಪಿಂಡಿಯ ವಿಶೇಷ ನ್ಯಾಯಾಲಯವು ಈ ಬಂಧನ ವಾರೆಂಟ್ ಜಾರಿಗೊಳಿಸಿದೆ.

ರಾವಲ್ಪಿಂಡಿಯ ವಿರೋಧಿ ಮಾಧಕ ವಸ್ತುಗಳ ಪಡೆ (ಎಎನ್ ಎಫ್) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಫ್ಕತುಲ್ಲಾ ಖಾನ್ ಅವರು ಶಹಾಬುದ್ದೀನ್ ಮತ್ತು ಮುಸಾ ಗಿಲಾನಿ ಅವರಿಗೆ ಬಂಧನ ವಾರೆಂಟ್ ಜಾರಿಗೊಳಿಸಿದ್ದಾರೆ.

ಶಹಾಬುದ್ದೀನ್ ಅವರು ಸಂಸತ್ತಿನ ಕೆಳಮನೆ ಚುನಾವಣೆಗಾಗಿ ನಾಮಪತ್ರ ಸಲ್ಲಿಸುವ ಸಮಯದಲ್ಲಿಯೇ ನ್ಯಾಯಾಲಯವು ಈ ಬಂಧನ ವಾರೆಂಟ್ ಅನ್ನು ಜಾರಿಗೊಳಿಸಿರುವುದು ಪಿಪಿಪಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.