ಮುಖ್ಯಮಂತ್ರಿಗಳಿಂದ ದಸರಾ ಪೋಸ್ಟರ್ ಬಿಡುಗಡೆ

7

ಮುಖ್ಯಮಂತ್ರಿಗಳಿಂದ ದಸರಾ ಪೋಸ್ಟರ್ ಬಿಡುಗಡೆ

Published:
Updated:
ಮುಖ್ಯಮಂತ್ರಿಗಳಿಂದ ದಸರಾ ಪೋಸ್ಟರ್ ಬಿಡುಗಡೆ

ಮೈಸೂರು: ನಾಡಹಬ್ಬ ದಸರಾಕ್ಕೆ ಸಂಬಂಧಿಸಿದ ಪೋಸ್ಟರ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ನಗರದ ಲಲಿತ ಮಹಲ್‌ ಪ್ಯಾಲೆಸ್‌ ಹೋಟೆಲ್‌ನಲ್ಲಿ ಬಿಡುಗಡೆ ಮಾಡಿದರು.ಸಮಾರಂಭದಲ್ಲಿ ಮಾತನಾಡಿದ ಅವರು ‘ದಸರಾಕ್ಕೆ ಒಟ್ಟು 10 ಕೋಟಿ ಮತ್ತು ವಿವಿಧ ಕಾಮಗಾರಿಗಳಿಗಾಗಿ ರೂ 19 ಕೋಟಿ ಹಣವನ್ನು ಪಾಲಿಕೆಗೆ ಬಿಡುಗಡೆ ಮಾಡಲಾಗುತ್ತಿದೆ.ಮಳೆ ಬಂದಿರುವ ಕಾರಣ ರಸ್ತೆ ಡಾಂಬರೀಕರಣ ಸ್ಥಗಿತಗೊಳಿಸಲಾಗಿದೆ. ದಸರಾ ಮುಗಿದ ಬಳಿಕ ಟೆಂಡರ್‌ ಕರೆದು ಕಾಮಗಾರಿ ಪೂರ್ಣಗೊಳಿಸಲಾಗುವುದು. ಸದ್ಯಕ್ಕೆ ಗುಂಡಿಗಳನ್ನು ಮುಚ್ಚಲಾಗುವುದು’ ಎಂದು ಹೇಳಿದರು.

‘ದಸರಾ ಪ್ರಾಧಿಕಾರ ರಚನೆ ಮಾಡಬೇಕೆಂದು ಮೂರು ವರ್ಷಗಳಿಂದ ಬೇಡಿಕೆ ಇದೆ. ಈಗಾಗಲೇ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಇದೆ. ದಸರಾ ಪ್ರಾಧಿಕಾರ ಯಾವ ರೀತಿ ರಚನೆ ಮಾಡಬೇಕು ಎಂಬುದನ್ನು ಪ್ರಸ್ತಾವನೆ ತರಿಸಿಕೊಂಡು ನೋಡಿ ಮುಂದಿನ ವರ್ಷ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry