ಮುಖ್ಯಮಂತ್ರಿಗೆ ಕಪ್ಪು ಬಟ್ಟೆ ಪ್ರದರ್ಶನ: ಎಚ್ಚರಿಕೆ

ಬುಧವಾರ, ಜೂಲೈ 17, 2019
24 °C

ಮುಖ್ಯಮಂತ್ರಿಗೆ ಕಪ್ಪು ಬಟ್ಟೆ ಪ್ರದರ್ಶನ: ಎಚ್ಚರಿಕೆ

Published:
Updated:

ರಾಣೆಬೆನ್ನೂರು: ಕೃಷಿ ಇಲಾಖೆಯ ಸಹಾಯಧನದ ಬೀಜ ವಿತರಣಾ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ಕಂಪನಿಯ ಬೀಜಗಳನ್ನು ಪೂರೈಕೆ ಮಾಡುತ್ತಿದ್ದು, ರೈತ ಬೇಡಿಕೆಗೆ ತಕ್ಕಂತೆ ಬೀಜಗಳನ್ನು ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ರವೀಂದ್ರಗೌಡ ಪಾಟೀಲ ಆರೋಪಿಸಿದ್ದಾರೆ.



ನಗರದಲ್ಲಿ ಶನಿವಾರ ಸಂಜೆ ಸುದ್ದಿಗಾರ ರೊಂದಿಗೆ ಮಾತನಾಡಿ, ತಾಲ್ಲೂಕಿನಲ್ಲಿ ಮೆಕ್ಕೆಜೋಳದ 818 ಹಾಗೂ ಸಿಪಿ ತಳಿಗಳ ಬೇಡಿಕೆ ಹೆಚ್ಚಾಗಿದ್ದು,  ಈ ಬೀಜಗಳ ಕೊರತೆ ಹೆಚ್ಚಾಗಿದೆ, ಕೂಡಲೇ ಈ ತಳಿಯ ಬೀಜಗಳನ್ನು ಪೂರೈಸಬೇಕು ಮತ್ತು ರಾಸಾಯನಿಕ ಗೊಬ್ಬರದ ಕೊರತೆಯಾಗದಂತೆ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.



ಕಾಳ ಸಂತೆಯಲ್ಲಿ ಬೀಜ ಗೊಬ್ಬರ ಮಾರಾಟ ಮಾಡುವವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು, ಡಿ.ಎಪಿ ಗೊಬ್ಬರದ ಕೊರತೆಯಾಗದಂತೆ ನಿಗಾವಹಿ ಸಬೇಕು, ಇಲ್ಲಿದ್ದರೆ ಎಲ್ಲ ಬೀಜ ವಿತರಣಾ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದರು.



ಕಪ್ಪುಬಟ್ಟೆ ಪ್ರದರ್ಶನ: ಉತ್ತರ ಕರ್ನಾಟಕಲ್ಲಿಯೇ ಅತ್ಯಂತ ತೀವ್ರಗತಿ ಯಲ್ಲಿ ಪ್ರತಿ ವರ್ಷ ನೆರೆಯನ್ನು ಅನುಭವಿಸುತ್ತಿರುವ ತುಂಭದ್ರಾ ಮತ್ತು ಕುಮಧ್ವತಿ  ಎರಡೂ ನದಿಗಳ ದಂಡೆ ಯಲ್ಲಿರುವ ಮುಷ್ಟೂರು ಗ್ರಾಮವನ್ನು ಸ್ಥಳಾಂತರಗೊಳಿಸುವಲ್ಲಿ ಸರ್ಕಾರ ನಿರ್ಲಕ್ಷ ತೋರುತ್ತಿರುವುದನ್ನು ವಿರೋಧಿಸಿ, ಜೂ.13 ರಂದು ಜಿಲ್ಲೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿಗಳಿಗೆ ನೆರೆ ಸಂತಸ್ಥರಿಂದ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುವುದು ಎಂದು ತಾಪಂ ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಎಚ್ಚರಿಕೆ ನೀಡಿದ್ದಾರೆ.



ಸ್ಥಳಾಂತರ ಪ್ರದೇಶದಲ್ಲಿ ಪಕ್ಷಪಾತ ಮಾಡಿ ನೆರೆಸಂತ್ರಸ್ಥರನ್ನು ನಡುನೀರಲ್ಲಿ ಬಿಟ್ಟು ಈಗ ಮತ್ತೊಂದು ಮಳೆಗಾಲ ದಲ್ಲಿ ಬರುವ ನೆರೆಯನ್ನು ಎದುರಿಸ ಬೇಕಾಗಿದೆ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಮನೆಯನ್ನು ಕಟ್ಟಿಕೊಟಲು ರಾಜ್ಯದ ಜನತೆಯಿಂದ ನೂರಾರು ಕೋಟಿಗಟ್ಟಲೇ ಹಣವನ್ನು ದೇಣಿಗೆ ಪಡೆದು, ಆ ಹಣದಿಂದ ಎಲ್ಲು ಮನೆ ಗಳನ್ನು ನಿರ್ಮಿಸದೇ, ನೆರೆಸಂತ್ರಸ್ಥರಿಗೆ ಹಾಗೂ ದೇಣಿಗೆದಾರರಿಗೆ ಸಂಶಯಕ್ಕೆ ಕಾರಣರಾಗಿದ್ದಾರೆ, ನಮ್ಮನ್ನು ನಡು ನೀರಲ್ಲಿ ಬಿಟ್ಟ ಸರ್ಕಾರದ ವಿರುದ್ದ ಕಪ್ಪು ಬಟ್ಟೆ ಪ್ರದರ್ಶನ ಮತ್ತು ಲೆಕ್ಕ ಕೊಡಿ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಪಾಟೀಲ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry