ಮುಖ್ಯಮಂತ್ರಿಗೆ ಶಂಕ್ರಪ್ಪ ಸ್ಥಾನ ತೆರವು ಖಚಿತ

7

ಮುಖ್ಯಮಂತ್ರಿಗೆ ಶಂಕ್ರಪ್ಪ ಸ್ಥಾನ ತೆರವು ಖಚಿತ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮೇಲ್ಮನೆ ಪ್ರವೇಶಿಸುವುದು ಖಚಿತವಾಗಿದೆ.

ವಿಧಾನಪರಿಷತ್ತಿನ ಹಾಲಿ ಸದಸ್ಯ ಎನ್. ಶಂಕ್ರಪ್ಪ ಅವರು ಮುಖ್ಯಮಂತ್ರಿಗಳಿಗಾಗಿ ತಮ್ಮ ಸ್ಥಾನವನ್ನು ಬಿಟ್ಟು ಕೊಡಲಿದ್ದಾರೆ. ಸದಾನಂದಗೌಡ ಅವರು ಎರಡು ಮೂರು ದಿನಗಳ ಹಿಂದೆ ಶಂಕ್ರಪ್ಪ ಅವರೊಂದಿಗೆ ಈ ಸಂಬಂಧ ಚರ್ಚೆ ನಡೆಸಿದ್ದು, ರಾಜೀನಾಮೆ ನೀಡಬೇಕಾಗುತ್ತದೆ ಎಂಬ ಸುಳಿವನ್ನು ನೀಡಿದ್ದರು.ಶನಿವಾರ ಸಂಜೆ ದೆಹಲಿಯಲ್ಲಿ ನಡೆದ ಬಿಜೆಪಿ ಹಿರಿಯ ಮುಖಂಡರ ಸಭೆಯಲ್ಲಿ ಎನ್. ಶಂಕ್ರಪ್ಪ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ವಿಧಾನಪರಿಷತ್ ಸ್ಥಾನವನ್ನು ಬಿಟ್ಟು ಕೊಡುವ ಶಂಕ್ರಪ್ಪ ಅವರಿಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ. ಲೋಕಸಭಾ ಸದಸ್ಯರಾಗಿರುವ ಸದಾನಂದಗೌಡ ಅವರು ಆರು ತಿಂಗಳ ಒಳಗಾಗಿ ವಿಧಾನಸಭೆ ಅಥವಾ ವಿಧಾನಪರಿಷತ್‌ನ ಸದಸ್ಯರಾಗಬೇಕು. ಈಗಾಗಲೇ ಮುಖ್ಯಮಂತ್ರಿಯಾಗಿ ಎರಡು ತಿಂಗಳ ಅವಧಿ ಪೂರೈಸಿರುವ ಅವರು ಮೇಲ್ಮನೆ ಸದಸ್ಯರಾಗಲು ನಿರ್ಧರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry