ಮುಖ್ಯಮಂತ್ರಿ ಬದಲಾವಣೆ ಇಲ್ಲವೇ ಇಲ್ಲ - ಈಶ್ವರಪ್ಪ

7

ಮುಖ್ಯಮಂತ್ರಿ ಬದಲಾವಣೆ ಇಲ್ಲವೇ ಇಲ್ಲ - ಈಶ್ವರಪ್ಪ

Published:
Updated:

ಬೆಂಗಳೂರು (ಪಿಟಿಐ): ರಾಜ್ಯಸರ್ಕಾರದ ನಾಯಕತ್ಪ ವಹಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಿಸುವ ಯಾವುದೇ ಜರೂರು ಇಲ್ಲ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಈಶ್ವರಪ್ಪ ಅವರು ನಾಯಕತ್ಪ ಬದಲಾವಣೆಯ ಊಹಾಪೋಹಾಗಳಿಗೆ ತೆರೆ ಶನಿವಾರ ತೆರೆ ಎಳೆದರು.

ಯಡಿಯೂರಪ್ಪ ಅವರ ದೆಹಲಿ ಪ್ರವಾಸವು ಹಲವು ಊಹಾಪೋಹಾಗಳಿಗೆ ಎಡೆ ಮಾಡಿಕೊಟ್ಟಿತ್ತು. ಆದರೆ ಶನಿವಾರ ಈಶ್ವರಪ್ಪ ಅವರು ಮುಂದಿನ ಎರಡು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರಲಿದ್ದು ನಾವೆಲ್ಲರೂ ಅವರ ನಾಯಕತ್ಪದಡಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

ಅಲ್ಲದೆ ವಿರೋಧ ಪಕ್ಷಗಳು ಮಧ್ಯಂತರ ಚುನಾವಣೆ ನಡೆಯುತ್ತದೆ ಎಂಬಂತಹ ಅಸಂಬದ್ದ ಹೇಳಿಕೆಗಳನ್ನು ನೀಡಿ ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿ ತನ್ನ ಕಾಲಾವಧಿಯನ್ನು ಪೂರೈಸಲಿದೆ ಎಂದೂ ಅವರು ನುಡಿದರು.

ದಕ್ಷಿಣ ಭಾರತದಲ್ಲಿ ಮೊದಲು ಅಧಿಕಾರಕ್ಕೆ ಬಂದ ಬಿಜೆಪಿ ತನ್ಮ ಅಧಿಕಾರಾವಧಿಯನ್ನು ಪೂರೈಸಿದ ಸಾವಿರ ದಿನಗಳ ಪ್ರಯುಕ್ತ ಇದೇ ತಿಂಗಳ 20 ರಂದು ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸಲಿದ್ದು, ಇದನ್ನು ಅಧ್ಯಕ್ಷ ನಿತಿನ್ ಗಡ್ಕರಿ ಅವರು ಉದ್ಘಾಟಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಈಶ್ವರಪ್ಪ ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry