ಶುಕ್ರವಾರ, ಜನವರಿ 24, 2020
21 °C

ಮುಖ್ಯಮಂತ್ರಿ ಭೇಟಿ: ಹೆಲಿಪ್ಯಾಡ್‌ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನ ಪಂಗರಗಾ ಬಳಿಯ ಪಂಚಾಕ್ಷರ ಪರ್ವತಲಿಂಗ ಪರಮೇಶ್ವರ ಮಹಾರಾಜರ ಸುಕ್ಷೇತ್ರ ಸೋನ್ಯಾಲಗಿರಿಯ  ಶ್ರೀಗಳ ಅನುಷ್ಠಾನ ಮುಕ್ತಾಯ ಸಮಾರಂಭಕ್ಕೆ ಡಿ.11ರಂದು ಮುಖ್ಯಮಂತ್ರಿ ಸಿದ್ದರಾ­ಮಯ್ಯ ಆಗಮಿಸುತ್ತಿರುವ ಹಿನ್ನೆಲೆ­ಯಲ್ಲಿ ತಹಶೀಲ್ದಾರರಾದ ಮೋಹನ ಜೋಷಿ ಹಾಗೂ ಜಗನ್ನಾಥರೆಡ್ಡಿ ಸೋನ್ಯಾಲಗಿರಿಗೆ ಶುಕ್ರವಾರ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಬಲರಾಮ ನಾಯಕ್‌, ಸಚಿವ ಖಮರುಲ್‌ ಇಸ್ಲಾಂ, ಡಾ. ಶರಣಪ್ರಕಾಶ ಪಾಟೀಲ, ಸಂಸದ ಎನ್‌.ಧರ್ಮಸಿಂಗ್‌ ಆಗಮಿಸ­ಲಿದ್ದಾರೆ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಬು ಪವಾರ್‌ ತಿಳಿಸಿದ್ದಾರೆ.ಗಣ್ಯರು ಹೆಲಿಕಾಪ್ಟರ್‌ ಮೂಲಕ ಬರುತ್ತಿರುವುದರಿಂದ ಲೋಕೋಪ­ಯೋಗಿ ಇಲಾಖೆಯ ಅಧಿಕಾರಿ­ಗಳೊಂ­ದಿಗೆ ಹೆಲಿಪ್ಯಾಡ್‌ನ ಸ್ಥಳ, ಸಮಾರಂಭ­ದ ವೇದಿಕೆ ಪರಿಶೀಲಿಸಲಾಯಿತು.ಕಾರ್ಯಪಾಲಕ ಎಂಜಿನಿಯರ್‌ ಬಾಬುರಾವ್‌ ಮಾಲಿ ಬಿರಾದಾರ, ಸಹಾಯಕ ಕಾರ್ಯಪಾಲಕ ಎಂಜಿನಿ­ಯರ್‌ (ಎಇಇ) ವಿಜಯಕುಮಾರ ಚತುರೆ, ಪಂಚಾಯತ್‌ ರಾಜ ಇಲಾಖೆ ರೇವಣಸಿದ್ದಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಮುಖಂಡ ಗೋರಕನಾಥ, ಅಣಕಲ್‌ ಗ್ರಾ.ಪಂ.ಅಧ್ಯಕ್ಷೆ ಸೋನಾಬಾಯಿ ರವಿ ರಾಠೋಡ್‌, ಹಾಮು ನಾಯಕ್‌, ಲಕ್ಷ್ಮಣ ಚವ್ಹಾಣ ಇದ್ದರು. ಲೋಕ ಕಲ್ಯಾಣಕ್ಕಾಗಿ ಪರಮೇಶ್ವರ ಮಹಾರಾಜರು 9­ತಿಂಗಳು 9 ದಿನಗಳ ಉಪವಾಸ ಕೈಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)