ಮುಖ್ಯಮಂತ್ರಿ ಮೌನ: ಬಿಜೆಪಿ ಲೇವಡಿ

7

ಮುಖ್ಯಮಂತ್ರಿ ಮೌನ: ಬಿಜೆಪಿ ಲೇವಡಿ

Published:
Updated:

ಬೆಂಗಳೂರು: ‘ಬಿಜೆಪಿ ಸರ್ಕಾರದಲ್ಲಿ ಸಚಿವರೊಬ್ಬರು ವಿಧಾನಸೌಧದ ಕೊಠ­ಡಿಯ ಗೋಡೆ ಒಡೆದಾಗ ಹಾರಾಡಿದ್ದ ಆಗಿನ ವಿರೋಧಪಕ್ಷದ ನಾಯಕ ಸಿದ್ದ­ರಾಮಯ್ಯ ಅವರು ಈಗೇಕೆ ಮೌನ ತಳೆ­ದಿದ್ದಾರೆ? ಅವರೇ ಸಚಿವ ಆಂಜನೇ­ಯ­ಗೆ ಹೇಳಿ ಗೋಡೆ ಒಡೆಸುತ್ತಿದ್ದಾ­ರೆಯೇ?’ಈ ಪ್ರಶ್ನೆ ಹಾಕಿದ್ದು ವಿಧಾನ ಪರಿ­ಷತ್ತಿನ ವಿರೋಧಪಕ್ಷದ ನಾಯಕ ಡಿ.ವಿ.­ಸದಾನಂದಗೌಡ.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಿದ್ದರಾಮಯ್ಯ ಮುಖ್ಯಮಂತ್ರಿ­ಯಾದ ತಕ್ಷಣ ಹಿಂದಿನ ಘಟನೆಗಳನ್ನು ಮರೆತಂತಿದೆ. ಪ್ರತಿಪಕ್ಷ ನಾಯಕರಾ­ಗಿ­ದ್ದಾಗ ವಿಧಾನಸಭೆಯಲ್ಲಿ ಈ ಕುರಿತು ಮಾತನಾಡಿದ್ದನ್ನು ಒಮ್ಮೆ ನೆನಪು ಮಾಡಿ­ಕೊಳ್ಳಲಿ’ ಎಂದು  ತಿರುಗೇಟು ನೀಡಿದರು.‘ಮುಖ್ಯಮಂತ್ರಿಯವರ ಮಾತು ಮತ್ತು ಕೃತಿಗೆ ಸಂಬಂಧ ಇಲ್ಲದಂತಾ­ಗಿದೆ. ಒಮ್ಮೆ ಹೇಳಿದ್ದನ್ನು ಮತ್ತೆ ವಾಪಸ್‌ ಪಡೆದು ಮತ್ತೇನನ್ನೊ ಹೇಳುವುದರ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿ­ದ್ದಾರೆ’ ಎಂದು ಟೀಕಿಸಿದರು.ಅಡಿಕೆಗೆ ಸ್ಪಷ್ಟನೆ ನೀಡಲಿ: ಅಡಿಕೆ ನಿಷೇಧಿಸುವಂತಹ ತೀರ್ಮಾನವನ್ನು ಕೇಂದ್ರ ತೆಗೆದು­ಕೊಂಡಿಲ್ಲ ಎಂದು ಹೇಳುವ ಮುಖ್ಯ­ಮಂತ್ರಿ, ಸುಪ್ರೀಂ­ ಕೋರ್ಟ್‌ಗೆ ಕೇಂದ್ರ ಸಲ್ಲಿಸಿ­ರುವ ಹೇಳಿಕೆಯಲ್ಲಿ ಏನಿದೆ ಎಂಬುದನ್ನು ಒಮ್ಮೆ ನೋಡಲಿ. ಅಡಿಕೆ ಆರೋಗ್ಯಕ್ಕೆ ಹಾನಿಕರ ಎನ್ನುವ ಹೇಳಿಕೆ­ಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರು­ವುದಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಇಂದಿರಾ ಜೈಸಿಂಗ್‌ ಹೇಳಿದ್ದಾರೆ. ಇವರ ಹೇಳಿಕೆಗೂ ಸಿಎಂ ಹೇಳಿಕೆಗೂ ವ್ಯತ್ಯಾಸ ಇದೆ. ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry