ಮುಖ್ಯವಾಹಿನಿಗೆ ನಕ್ಸಲರು– ಆಗ್ರಹ

7

ಮುಖ್ಯವಾಹಿನಿಗೆ ನಕ್ಸಲರು– ಆಗ್ರಹ

Published:
Updated:

ಬೆಂಗಳೂರು: ‘ನಕ್ಸಲ್‌ ಹೋರಾಟ­ಗಾ­ರರನ್ನು ಮುಖ್ಯ­­ವಾಹಿನಿಗೆ ತರಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ಜನಶಕ್ತಿ ಸಂಘಟ­ನೆಯ ಅಧ್ಯಕ್ಷ ಪ್ರೊ. ­ನಗರಗೆರೆ ರಮೇಶ್‌ ಒತ್ತಾಯಿಸಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ­ಯಲ್ಲಿ ಮಾತನಾಡಿದ ಅವರು, ‘ನಕ್ಸ­ಲರು ಸಶಸ್ತ್ರ ಹೋರಾಟ ಕೈಬಿಟ್ಟರೆ ಅವರ ಜೊತೆ ಮಾತುಕತೆಗೆ ಸಿದ್ಧ ಎಂದು ಸರ್ಕಾರ ಪ್ರಕ­ಟಿಸಿದೆ. ಹಾಗೆಯೇ ತಮ್ಮ ಮೇಲಿನ ಮೊಕದ್ದ­ಮೆಗಳನ್ನು ಹಿಂತೆಗೆದು­ಕೊಂಡರೆ ಮುಖ್ಯ­ವಾಹಿ­ನಿಗೆ ಬರಲು ಸಿದ್ಧರಿದ್ದೇವೆ ಎಂದು ನಕ್ಸಲ್‌ ಹೋರಾಟ­ಗಾರ­ರಾದ ನೂರ್‌ ಜುಲ್ಫೀಕರ್‌ ಮತ್ತು ಸಿರಿಮನೆ ನಾಗರಾಜ್ ಹೇಳಿ­ದ್ದಾರೆ. ಆದ್ದ­ರಿಂದ ಸರ್ಕಾರ ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದರು.ಸಶಸ್ತ್ರ ಹೋರಾಟ ಕೈಬಿಟ್ಟು ಜನರ ಸಮಸ್ಯೆಗಳ ವಿರುದ್ಧ ಕಾನೂನಿನ ಚೌಕಟ್ಟಿ­ನಲ್ಲಿ ಹೋರಾಟ ನಡೆಸುತ್ತೇವೆ ಎಂದು ನಕ್ಸಲ್‌ ಹೋರಾಟಗಾರರು ಅಭಿಪ್ರಾಯ ಮುಂದಿಟ್ಟಿರುವುದು ಪ್ರಜಾಪ್ರಭುತ್ವ ವ್ಯವ­ಸ್ಥೆಯಲ್ಲಿ ಮಹತ್ವದ ಬೆಳವಣಿಗೆ. ಆದ್ದ­ರಿಂದ ನಕ್ಸಲರು ಸಮಾಜದ ಮುಖ್ಯ­ವಾಹಿನಿಗೆ ಸೇರಲು ಅವಕಾಶ ನೀಡಬೇಕು ಎಂದರು.ರಾಜ್ಯ ರೈತ ಸಂಘದ ಉಪಾಧ್ಯಕ್ಷ ಜೆ.ಎಂ.­ವೀರಸಂಗಯ್ಯ, ದಲಿತ ಸಂಘರ್ಷ ಸಮಿತಿಯ ಮುಖಂಡ ಎನ್‌.ವೆಂಕಟೇಶ್‌ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry