ಮುಖ್ಯಾಧಿಕಾರಿ ನೋಟಿಸ್ಗೆ ತಿರುಗೇಟು!
ಶಹಾಪುರ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ತಮ್ಮ ಮಾಲೀಕತ್ವದ ಉದ್ಯಾನಕ್ಕಾಗಿ ಬಿಟ್ಟಿರುವ ಜಾಗವನ್ನು ಲೇಔಟ್ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭೆ ಮುಖ್ಯಾಧಿಕಾರಿಯ ನೀಡಿದ್ದ ನೋಟಿಸ್ಗೆ ಉತ್ತರಿಸಿ ಉದ್ಯಾನ ಜಾಗವನ್ನು ಮಾರ್ಪಡಿಸಿ ಪ್ಲಾಟ್ಗಳನ್ನು ಮಾಡಿರುವುದನ್ನು ಒಪ್ಪಿಕೊಂಡಿರುವುದು ಸಲ್ಲಿಸಲಾದ ಉತ್ತರದಲ್ಲಿ ಬಹಿರಂಗವಾಗಿದೆ.
ಪಟ್ಟಣದ ಸರ್ವೇನಂಬರ್ 382/1 ಲೇಔಟ್ ಮಾಡಿಸಿದ್ದು. ಹಳಿಸಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ. ಪಂಚಾಯಿತಿ ತನ್ನ ಅಧಿಕಾರದ ಅಡಿಯಲ್ಲಿ ಹಲವಾರು ಲೇಔಟ್ಗಳನ್ನು ಉದ್ಯಾನ ಸಹಿತ ಮಾರ್ಪಡಿಸಿ ಕೊಟ್ಟಿರುವುದು ತಿಳಿದು ಬಂದ ನಂತರ `ಎಲ್ಲರಂತೆ ನಾವು ಕೂಡಾ ತಿದ್ದುಪಡಿ ಮಾಡಿಸಿಕೊಂಡಿದ್ದು ನಿಜವಿರುತ್ತದೆ~ ಎಂದು ಪುರಸಭೆ ಮುಖ್ಯಾಧಿಕಾರಿ ನೀಡಿದ ನೋಟಿಸ್ಗೆ ಲೇಔಟ್ ಮಾಲೀಕ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ದಲಿಂಗಪ್ಪ ಆನೇಗುಂದಿ ಮತ್ತು ಶಿವಣ್ಣ ಕಾಮಾ ತಿರುಗೇಟು ನೀಡಿದ್ದಾರೆ.
ಪುರಸಭೆ ಪಾತ್ರ ಏನೂ ಇರುವುದಿಲ್ಲ. ಕೆಲ ವರ್ಷಗಳ ಹಿಂದೆ ಹಳಿಸಗರ ಪಂಚಾಯಿತಿ ಪುರಸಭೆ ವ್ಯಾಪ್ತಿಯಲ್ಲಿ ಸೇರ್ಪಡೆಗೊಂಡಿರುತ್ತದೆ. ಶಹಾಪುರ ಹಾಗೂ ಹಳಿಸಗರದಲ್ಲಿ ನೂರಾರು ಲೇಔಟ್ಗಳನ್ನು ಮಾರ್ಪಡಿಸಿ ನಂಬರ್ ಕೊಡುತ್ತಾ ಬಂದಿದ್ದಾರೆ. ಅವುಗಳಲ್ಲಿ ಖಾಸಗಿಯವರು ಇಲ್ಲವೆ ಸಂಘ ಸಂಸ್ಥೆಯವರು ಕಟ್ಟಿಕೊಂಡಿದ್ದು ಅಲ್ಲದೆ ಮಾರಿಕೊಂಡ ಬಗ್ಗೆ ರಾಜ್ಯದ ಎಲ್ಲಾ ಪುರಸಭೆ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಆಗಿದೆ ಎಂದು ಅವರು ನೋಟಿಸ್ನ ಉತ್ತರದಲ್ಲಿ ತಿಳಿಸಿದ್ದಾರೆ.
`ಕಾನೂನು ತೊಡರು ಬಂದ ಕಾರಣ ಬೇರೆಯವರಿಗೆ ಮಾರಿದ್ದ ಪ್ಲಾಟ್ ವಾಪಸ್ ಪಡೆಯಲಾಗಿದೆ. ಉದ್ಯಾನದಲ್ಲಿ ಮಾರ್ಪಡಿಸಿ ಆಗಿರುವ ಪ್ಲಾಟ್ಗಳು ನಮ್ಮ ಹೆಸರಿನಲ್ಲಿ, ಮಗಳ ಹೆಸರಿನಲ್ಲಿಯೇ ಇರುತ್ತವೆ~. ಕೋರ್ಟ್ ಇಲ್ಲವೆ ಸರ್ಕಾರ ಎಲ್ಲರಿಗೂ ಸಂಬಂಧಪಟ್ಟಂತೆ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಲೇಔಟ್ಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡಿಕೊಂಡು ಎಲ್ಲರಿಗೂ ನೋಟಿಸ್ ನೀಡಬೇಕು.ನಿಮ್ಮ ಮೇಲೆ ದೂರು ಬಂದಿದೆ ಅದಕ್ಕೆ ನೋಟಿಸ್ನೀಡಿದೆ ಎಂದಾದರೆ ಉಳಿದವರಿಗೂ ನಮ್ಮ ಅರ್ಜಿಯನ್ನು ದೂರ ಎಂದು ಪರಿಗಣಿಸಿ ನೋಟಿಸ್ ನೀಡಬೇಕು. ವರದಿಯನ್ನು ಸರ್ಕಾರಕ್ಕೆ ತಿಳಿಸಬೇಕು. ಸಂಬಂಧಪಟ್ಟ ದಾಖಲೆಗಳು ನಮ್ಮ ಬಳಿ ಇವೆ ಎಂದು ಮಾರುತ್ತರ ನೀಡಿದ್ದಾರೆ.
`ಕಾನೂನು ನಮಗೂ ಮಾತ್ರ ಅನ್ವಯಿಸದೆ ಅದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ತಿಳಿದಿದ್ದೇವೆ~. ಸೂಕ್ತ ಕ್ರಮ ತೆಗೆದುಕೊಂಡು ಸಮಸ್ಯೆ ಇತ್ಯರ್ಥಪಡಿಸಬೇಕೆಂದು ತಿಳಿಸಿದ್ದಾರೆ.
ಆಗ್ರಹ: ಕಾನೂನು ಬಾಹಿರವಾಗಿ ಉದ್ಯಾನ ಜಾಗವನ್ನು ಮಾರ್ಪಡಿಸಿ ಲೇಔಟ್ ಮಾಡಿಕೊಂಡು ಏಳು ನಿವೇಶನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಲಿಖಿತವಾಗಿ ಪುರಸಭೆ ಮುಖ್ಯಾಧಿಕಾರಿಗೆ ಸಲ್ಲಿಸಿದ ಉತ್ತರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ದಲಿಂಗಪ್ಪ ಆನೇಗುಂದಿ ಹಾಗೂ ಶಿವಣ್ಣ ಕಾಮಾ ತಿಳಿಸಿದ್ದಾರೆ.
ತಕ್ಷಣವೇ ಸಾರ್ವಜನಿಕ ಉದ್ಯಾನ ಜಾಗವನ್ನು ವಾಪಸ್ಸು ಪಡೆಯಬೇಕು ಹಾಗೂ ದಾಖಲೆಗಳನ್ನು ತಿದ್ದುಪಡಿ ಮಾಡಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಇಡೀ ಅಕ್ರಮವನ್ನು ಬಯಲಿಗೆ ತಂದು ಹೋರಾಟ ನಡೆಸುತ್ತಿರುವ ಕಲ್ಯಾಣ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಂಬರೇಶ ಬಿಲ್ಲವ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.