ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಕೆ

7

ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಕೆ

Published:
Updated:

ದೊಡ್ಡಬಳ್ಳಾಪುರ:  ರಾಷ್ಟ್ರೀಯ ಹೆದ್ದಾರಿ ೨೦೭ಕ್ಕೆ ಭೂ ಸ್ವಾಧೀನ ಪಡಿಸಿಕೊಳ್ಳು ತ್ತಿರುವ ಹಿನ್ನೆಲೆಯಲ್ಲಿ ಮನೆ ಹಾಗೂ ವಾಣಿಜ್ಯ ಮಳಿಗೆಗಳನ್ನು ಕಳೆದು ಕೊಳ್ಳು ವವರಿಗೆ ಗುಂಪು ಮನೆ, ವಾಣಿಜ್ಯ ಮಳಿಗೆ ಗಳನ್ನು ನಿಮಿರ್ಸಿಕೊಡಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್‌.ವಿ. ರಂಗ ನಾಥ್‌ ಅವರಿಗೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಹೋರಾಟ ಸಮಿತಿ ವತಿಯಿಂದ ಮನವಿ ಪತ್ರ ಸಲ್ಲಿಸ ಲಾಯಿತು.ಈ ಕುರಿತು ಮಾಹಿತಿ ನೀಡಿದ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್‌.ಚಂದ್ರತೇಜಸ್ವಿ, ‘ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಸ್ವಾಧೀನಪಡಿಸಿ ಕೊಳ್ಳುತ್ತಿರುವ ಭೂಮಿಗೆ ಕನಿಷ್ಠ 50 ರಿಂದ ಗರಿಷ್ಠ 80 ಲಕ್ಷ ರೂಪಾಯಿ ನಿಗದಿ ಪಡಿಸಬೇಕು’ ಎಂದು ಆಗ್ರಹಿಸಿದರು.‘ಭೂ ಸ್ವಾಧೀನ ಕುರಿತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯಿದೆ ಪ್ರಕಾರ ರೈತರಿಗೆ ಮಾರುಕಟ್ಟೆ ಬೆಲೆಗಿಂತಲೂ ನಾಲ್ಕು ಪಟ್ಟು ಹೆಚ್ಚಿನ ಪರಿಹಾರ ನೀಡಬೇಕು. ರೈತರು ತಮ್ಮ ತೋಟಗಳಲ್ಲಿಯೇ ಮನೆಗಳನ್ನು ನಿರ್ಮಿಸಿ ಕೊಂಡು ವಾಸ ಮಾಡುವುದು ಸಹಜ. ಆದರೆ ಈಗ ಸ್ವಾಧೀನಕ್ಕೆ ಒಳಗಾಗು ತ್ತಿರುವ ಕೃಷಿ ಭೂಯಲ್ಲಿನ ವಾಸದ ಮನೆಗಳಿಗೂ ಬೆಲೆ ನಿಗದಿಪಡಿಸಿ ಹಣ ನೀಡಬೇಕು’ ಎಂದು ಒತ್ತಾಯಿಸಿದರು.‘ರಾಷ್ಟ್ರೀಯ ಹೆದ್ದಾರಿ ೨೦೭ರ ಅಗಲೀಕರಣಕ್ಕೆ ಸ್ವಾಧೀನಪಡಿಸಿಕೊಳ್ಳುತ್ತಿ ರುವ ಭೂಮಿಗೆ ಸಂಬಂಧಿಸಿದಂತೆ ಪಹಣಿ, ಹೆಸರು ಬದಲಾವಣೆ, ಭೂಮಿ ಯ ಮೂಲ ನಕ್ಷೆ ಸೇರಿದಂತೆ  ಇನ್ನಿತರೆ ಸಣ್ಣ ಪುಟ್ಟ ತಪ್ಪುಗಳಿಗೂ ರೈತರು ಬೆಂಗ ಳೂರಿನಲ್ಲಿರುವ ಗ್ರಾಮಾಂತರ ಜಿಲ್ಲಾ ಧಿಕಾರಿ ಕಚೇರಿಗೆ ಅಲೆದಾಡುವಂತಾ ಗಿದೆ. ಇದನ್ನೇ ಬಂಡವಾಳ ಮಾಡಿ ಕೊಂಡಿರುವ ಕೆಲ ಮಧ್ಯವರ್ತಿಗಳು ರೈತ ರಿಂದ ಹಣ ಪಡೆದು ಶೋಷಣೆ ಮಾಡು ತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಸ್ವಾಧೀನಕ್ಕೆ ಒಳಪಡುತ್ತಿರುವ ಭೂಮಿಯ ವಿವಾದ ಗಳನ್ನು ಸರಿ ಪಡಿ ಸಲು ಕಂದಾಯ ಇಲಾಖೆಯ ವಿಶೇಷ ಅಧಿಕಾರಿಯನ್ನು ಕೂಡಲೇ ನೇಮಕ ಮಾಡಬೇಕು ಎಂದು ಮನವಿ ಮಾಡಿದರು. ಸಮಿತಿಯ ಸಂಚಾಲಕ ವಿಜಯ ಕುಮಾರ್, ಕೆಂಪೇಗೌಡ, ಸಿ.ಎಚ್. ರಾಮಕೃಷ್ಣ, ವೀರಣ್ಣ, ಸಿದ್ದಲಿಂಗಯ್ಯ, ನಂಜುಂಡಯ್ಯ  ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry