ಮುಖ್ಯ ಸ್ಥಳದಲ್ಲಿ ಮಾಹಿತಿ ಕೇಂದ್ರ ಸ್ಥಾಪನೆಗೆ ಆದ್ಯತೆ

7

ಮುಖ್ಯ ಸ್ಥಳದಲ್ಲಿ ಮಾಹಿತಿ ಕೇಂದ್ರ ಸ್ಥಾಪನೆಗೆ ಆದ್ಯತೆ

Published:
Updated:

ಗಂಗಾವತಿ:  78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಈಗಾಗಲೇ ಹಲವು ಯೋಜನೆ ಹಮ್ಮಿಕೊಳ್ಳಲಾಗಿದ್ದು, ಮಾಹಿತಿ ಮತ್ತು ವಿಚಾರಣೆ ಕೇಂದ್ರಸ್ಥಾಪನೆಗೆ ಅಗತ್ಯ ಏರ್ಪಾಡು ಮಾಡಿರುವುದಾಗಿ ಮಾಹಿತಿ ಮತ್ತು ವಿಚಾರಣಾ ಸಮಿತಿ ಅಧ್ಯಕ್ಷ ಟಿ. ಆಂಜನೇಯ ಹೇಳಿದರು.ಭಾನುವಾರ ಸಮ್ಮೇಳನದ ಸ್ವಾಗತ ಸಮಿತಿಯ ಕಚೇರಿಯಲ್ಲಿ ನಡೆದ  ಮಾಹಿತಿ ಮತ್ತು ವಿಚಾರನಾ ಸಮಿತಿಯ ಪ್ರಥಮ ಸಭೆಯಲ್ಲಿ ಅವರಿ ಮಾತನಾಡಿದರು.ಸಮ್ಮೇಳನದ ಯಶಸ್ವಿಗೆ ಸರ್ವರ ಸಹಕಾರ ಅವಶ್ಯ. ಮಾಹಿತಿ ವಿಚಾರಣಾ ಸಮಿತಿಗೆ ಪೂರಕವಾಗಿ ಕೆಲಸ ನಿರ್ವಹಿಸುವ ಇತರೆ ಸಮಿತಿಗಳಾದ ವಸತಿ, ಜಿಲ್ಲಾದರ್ಶನ, ದಾಸೋಹ, ಸಾರಿಗೆ ಇವುಗಳ  ಮಾಹಿತಿಯನ್ನು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದರು.ಬ್ಯಾನರ್ ಹಾಕಲಾಗುತ್ತದೆ. ಮನೆ ಮನೆ ಅತಿಥಿ ಅಡಿಯಲ್ಲಿ ಸಾಹಿತಿಗಳನ್ನು ಬರ ಮಾಡಿಕೊಳ್ಳುವ ಮನೆಗಳ ಮಾಲೀಕರ ಹೆಸರು, ದೂರವಾಣಿ ಸಂಖ್ಯೆ ಸಂಗ್ರಹಿಸಿ  ನೀಡಲಾಗುವುದು ಎಂದರು.ಸದಸ್ಯ ಉಪನ್ಯಾಸಕ ಚಂದ್ರೇಗೌಡ ಪೊ. ಪಾಟೀಲ್, ಆರ್.ಬಿ.ರೆಡ್ಡಿ  ಲಹೆ ನೀಡಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಸ್ವಾಗತ ಸಮಿತಿಯ ಸಹ ಕಾರ್ಯದರ್ಶಿ ಬಸವರಾಜ ಕೋಟೆ, ಮೆರವಣಿಗೆ ಸಮಿತಿ ಅಧ್ಯಕ್ಷ ಪಾಡಗುತ್ತಿ ಅಕ್ತರಸಾಬ್, ಬಸವರೆಡ್ಡಿ ಆಡೂರು, ಚನ್ನಬಸಪ್ಪ, ಎಸ್.ಬಿ.ಗೊಂಡಬಾಳ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry