ಭಾನುವಾರ, ಮೇ 16, 2021
24 °C

ಮುಗಿಯದ ಕೆರೆ ಕಾಮಗಾರಿ: ಸಂಕಷ್ಟದಲ್ಲಿ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: `ಇಲ್ಲಿನ ಕೆರೆಯ ಅಭಿವೃದ್ಧಿ ಕಾಮಗಾರಿ ಆರಂಭವಾಗಿ 7 ತಿಂಗಳೇ ಕಳೆದಿದೆ. ಆದರೆ, ಇನ್ನೂ ಪೂರ್ಣಗೊಂಡಿಲ್ಲ. ಅಭಿವೃದ್ಧಿ ನೆಪದಲ್ಲಿ ತೂಬು ಕೀಳಲಾಗಿದೆ. ಆದರೆ, ಇದರ ದುರಸ್ತಿಯಾಗಿಲ್ಲ. ಪುನಶ್ವೇತನದ ಹೆಸರಿನಲ್ಲಿ ಕೆರೆ ಏರಿ ಮಾತ್ರ ಎತ್ತರಿಸಲಾಗಿದೆ. ಆದರೆ, ಒಳಗಿರುವ ಗಿಡಗಂಟಿ ಕಿತ್ತಿಲ್ಲ, ಹೂಳು ತೆಗೆದಿಲ್ಲ~.ಹೌದು. ಇದು. ಬೂದಂಬಳ್ಳಿ ಹಾಗೂ ಬೂದಂಬಳ್ಳಿ ಮೋಳೆ ಗ್ರಾಮದ ರೈತರ ಜೀವ ನಾಡಿಯಾಗಿರುವ  ಕೆರೆಯ ದುಸ್ಥಿತಿ. ಕೆರೆ ಅಭಿವೃದ್ಧಿ ಹಾಗೂ ಪುನಶ್ಚೇತನ ಯೋಜನೆಯಡಿ ಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯ ವತಿಯಿಂದ ಕಾಮಗಾರಿಗೆ ಚಾಲನೆ ದೊರಕಿ 7 ತಿಂಗಳೇ ಕಳೆದಿವೆ. ಆದರೆ, ಇದು ಪೂರ್ಣಗೊಂಡಿಲ್ಲ.

 

24.9 ಹೆಕ್ಟೇರ್ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಕೆರೆಯು 100 ಎಕರೆ ಜಮೀನಿಗೆ ನೀರುಣಿಸುತ್ತದೆ. ಸಣ್ಣ ರೈತರೇ ಹೆಚ್ಚಾಗಿರುವ ಈ ಭಾಗದಲ್ಲಿ ಇದು ಇವರ ಜೀವನಾಡಿಯಾಗಿದೆ. ವಾರ್ಷಿಕವಾಗಿ ಕೇವಲ ಒಂದೇ ಬೆಳೆ ಬೆಳೆಯುತ್ತಾರೆ ಇಲ್ಲಿನ ರೈತರು. ಕೆರೆಗೆ ಮಳೆಯಾಶ್ರಯ ಮಾತ್ರ ಇರುವುದರಿಂದ ಮಳೆಗಾಲದಲ್ಲಿ ತುಂಬುತ್ತದೆ. ಆದರೆ, ಈ ವರ್ಷ ಮಾತ್ರ ಇಲ್ಲಿನ ರೈತರಲ್ಲಿ ಆತಂಕ ಆವರಿಸಿದೆ.ಅಕ್ಕಪಕ್ಕದ ಗ್ರಾಮಗಳಾದ ಮೂಕಹಳ್ಳಿ, ಹೊಂಗನೂರು, ಗೂಳೀಪುರ ಹಾಗೂ ರೇಚಂಬಳ್ಳಿ ಗ್ರಾಮಗಳಿಂದ ಇಲ್ಲಿಗೆ ನೀರು ಸಂಗ್ರಹವಾಗುತ್ತದೆ. ಆದರೆ, ಸಂಗ್ರಹವಾಗುವ ಕಾಲುವೆಗಳೂ ಸಹ ಹೂಳಿನಿಂದ ತುಂಬಿವೆ. ಇದರ ದುರಸ್ತಿಯೂ ಆಗಬೇಕಿದೆ. ಸಂಬಂಧಪಟ್ಟ ಗುತ್ತಿಗೆದಾರರು ಕಾಮಗಾರಿ ವಿಳಂಬ ಮಾಡುತ್ತಿರುವುದರಿಂದ ಇಲ್ಲಿನ ರೈತರಿಗೆ ಅನಾನುಕೂಲವಾಗುತ್ತಿದೆ ಎಂಬುದು ಗ್ರಾಮದ ಪಿ. ಮರಿಸ್ವಾಮಿ, ಕುಮಾರ್ ಅವರ ದೂರು.ಕೆರೆಗೆ ಪಕ್ಕದಿಂದಲೇ ಹರಿಯುವ ಕಬಿನಿ ನಾಲೆಯಿಂದ ನೀರನ್ನು ತುಂಬಿಸುವ ಕೆಲಸವಾಗಬೇಕು. ಕೆರೆಯ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಈಗಾಗಲೇ ಸ್ಥಳೀಯ ಶಾಸಕರಲ್ಲಿ ಮನವಿ ಮಾಡಿಕೊಳ್ಳ ಲಾಗಿದೆ.ಈ ಬಗ್ಗೆ ಅವರಿಂದ ಸಕಾರಾತ್ಮಕ ಉತ್ತರ ದೊರಕಿದೆ. ಆದರೆ, ಇದು ಆದಷ್ಟು ಬೇಗ ಕಾರ್ಯ ರೂಪಕ್ಕೆ ಬರಲಿ ಎಂದು ಗ್ರಾಮದ ನಾಗರಾಜು, ಬಸವರಾಜು, ಚಿನ್ನಸ್ವಾಮಿ, ವಿಷಕಂಠ ಅವರ ಅಭಿಪ್ರಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.