ಮುಗಿಯದ ಕ್ರೀಡಾಂಗಣ ಕಾಮಗಾರಿ

7

ಮುಗಿಯದ ಕ್ರೀಡಾಂಗಣ ಕಾಮಗಾರಿ

Published:
Updated:

ಸಂಡೂರು: ಪಟ್ಟಣದ ಕಪ್ಪಲಕುಂಟೆ ರಸ್ತೆಯಲ್ಲಿ 7 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಅಪೂರ್ಣ­ಗೊಂಡಿದೆ. ಕ್ರೀಡಾಂಗಣ ಕಾಮಗಾರಿ ಪೂರ್ಣ­ಗೊಳಿಸಲು ಮುಗಿಯುವುದು ಯಾವಾಗ ಎಂಬುದು ಎಲ್ಲರ ಪ್ರಶ್ನೆ.ಕ್ರೀಡಾಂಗಣದ ಮೊದಲ ಹಂತದಲ್ಲಿ 2009-10ರಲ್ಲಿ ಬಿಡುಗಡೆಯಾದ ರೂ 48 ಲಕ್ಷದಲ್ಲಿ ಎರಡು ಬ್ಲಾಕ್, ಪ್ರವೇಶ ದ್ವಾರ ಮತ್ತು ಒಳ­ಚರಂಡಿ ನಿರ್ಮಿಸಲಾಗಿದೆ. ನಂತರ ಅಭಿವೃದ್ಧಿಗೆ ರೂಪಿತವಾಗದ ಅನುದಾನ ಬಿಡುಗಡೆ­ಯಾಗದೆ ಕಾಮಗಾರಿ ಸ್ಥಗಿತಗೊಂಡು, ಅದರ ಸುತ್ತ ಗಿಡಗಂಟಿಗಳು ಬೆಳೆದಿವೆ.ತಾಲ್ಲೂಕಿನ ಕ್ರೀಡಾ ಚಟುವಟಿಕೆಗಳಿಗೆ ಶಾಲಾ ಕಾಲೇಜುಗಳು ಖಾಸಗಿ ಮೈದಾನ ಆಶ್ರಯಿಸು­ವಂತಾಗಿದೆ. ಖಾಸಗಿ ಶಾಲಾ ಕಾಲೇಜುಗಳೂ ಕ್ರೀಡಾ ಚಟುವಟಿಕೆ­­ಗಳಿಗೆ ಪರದಾಡು­ವಂತಾ­ಗಿದೆ. ಕ್ರೀಡಾ ಚಟುವಟಿಕೆಗಳು ನಡೆಯುತ್ತಿದ್ದರೆ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾ­ಗುತ್ತದೆ. ಕ್ರೀಡಾಸಕ್ತರ ಸಂಖ್ಯೆಯೂ ಹೆಚ್ಚುವುದು. ಕ್ರೀಡೆಗಳ ತರಬೇತಿ, ಅಭ್ಯಾಸಕ್ಕಾಗಿ ಖಾಸಗಿ ಕಾಲೇಜು­ಗಳ ಮೈದಾನಕ್ಕೆ ಅಲೆಯಬೇಕಾಗಿದೆ. ಕೆಲವೊಮ್ಮೆ ಖಾಸಗಿ ಕಾಲೇಜುಗಳ ಮೈದಾನ ದೊರೆಯ­ದಿದ್ದಾಗ ತೊಂದರೆ ಅನುಭವಿಸು­ವಂತಾ­ಗುತ್ತದೆ. ಕೆಲವರು ಪಾರ್ಕ್‌ಗಳನ್ನೇ ಮೈದಾನದಂತೆ ಬಳಸಬೇಕಾಗಿದೆ.ಕ್ರೀಡಾಂಗಣ ಅಭಿವೃದ್ಧಿಗೆ ಹೆಚ್ಚಿನ ಅನು­ದಾನದ ಅವಶ್ಯಕತೆ ಇದೆ.  ಕ್ರೀಡಾಂಗ­ಣದ ಸುತ್ತ ಕಾಂಪೌಂಡ್ ನಿರ್ಮಿಸ­ಬೇಕಿದೆ.  ಸುತ್ತಲಿನ ಪ್ರದೇಶ­ದಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸಿ, ಮೈದಾನವನ್ನು  ಸಮತಟ್ಟುಗೊಳಿಸಿ, ಟ್ರ್ಯಾಕ್ ನಿರ್ಮಿಸಬೇಕಿದೆ. ಕ್ರೀಡಾಂಗಣದ ಬ್ಲಾಕ್‌ಗಳ ಮೇಲೆ ಛಾವಣಿ ನಿರ್ಮಿಸಬೇಕಿದೆ. ಮೈದಾನದ ಸುತ್ತಲೂ ಪ್ರೇಕ್ಷಕರು ಕುಳಿತು ನೋಡಲು ಅನುಕೂಲವಾಗುವಂತೆ ಸ್ಟೇಡಿಯಂ ಬ್ಲಾಕ್‌­ಗಳನ್ನು ನಿರ್ಮಿಸುವ ಅವಶ್ಯಕತೆ ಇದೆ. ಇಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅವಶ್ಯಕವಾದ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಬೇಕಿದೆ.ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ­ರಾದ ರಾಜು ಬಾವಿಹಳ್ಳಿ, ಹಂತಹಂತ­ವಾಗಿ ಇಲ್ಲಿನ ಕ್ರೀಡಾಂಗಣವನ್ನು ಅಭಿವೃದ್ಧಿ ಗೊಳಿಸ­ಲಾ­ಗುತ್ತಿದೆ. ಮುಂದಿನ ಹಂತದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕಾ­ಗಿದೆ. ಈ ಕುರಿತು ಸ್ಥಳೀಯ ಶಾಸಕ­ರೊಂದಿಗೆ ಚರ್ಚಿಸಿ, ಕ್ರಮಕೈಗೊಳ್ಳಲಾ­ಗುವುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry