ಬುಧವಾರ, ಏಪ್ರಿಲ್ 14, 2021
23 °C

ಮುಗಿಯದ ತರಕಾರಿ ಮಾರುಕಟ್ಟೆ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ರೈತರಿಗೆ ತರಕಾರಿ ದಲ್ಲಾಳಿಗಳಿಂದ ಯಾವುದೇ ಶೋಷಣೆ ಆಗುತ್ತಿಲ್ಲ ಎಂಬುದನ್ನು ತಿಳಿಸಲು ಶನಿವಾರ ಬೆಳಿಗ್ಗೆ ಎಲ್ಲ ದಲ್ಲಾಳಿಗಳು ಮಾಧ್ಯಮ ಪ್ರತಿನಿಧಿಗಳನ್ನು ತರಕಾರಿ ಮಾರುಕಟ್ಟೆಗೆ ಕರೆಸಿಕೊಂಡು ರೈತರಿಂದಲೇ ಸಮಜಾಯಿಷಿ ಕೊಡಿಸಿದರು.ತರಕಾರಿ ಮಾರಾಟಗಾರರ ಬಾಗವಾನ ಸಮಾಜದ ಅಧ್ಯಕ್ಷ ಡಿ.ಡಿ.ಬಾಗವಾನ ಮಾತನಾಡಿ. ಹೊರಗಡೆ ಕಿರುಕುಳ ತರಕಾರಿ ಮಾರಾಟಗಾರರು ಪ್ರತಿ  ಗುರುವಾರ ತಮ್ಮ ಅಂಗಡಿ ಬಂದ್ ಮಾಡಿ ಮಾರುಕಟ್ಟೆಯಲ್ಲಿ ನಡೆಯುವ ಸಂತೆಯಲ್ಲಿಯೇ ತರಕಾರಿ ಮಾರಾಟ ಮಾಡಬೇಕು ಎಂದು ಬಹಳಷ್ಟು ವರ್ಷಗಳ ಹಿಂದೆಯೇ ನಿರ್ಧರಿಸಲಾಗಿದ್ದು, ಎಲ್ಲರೂ ಇದನ್ನು ಪಾಲಿಸಿದರೆ ಯಾವುದೇ ಗೊಂದಲ, ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.ಎಪಿಎಂಸಿಯಲ್ಲಿ ತರಕಾರಿ ಹರಾಜು ಮಾಡಲು ಜಾಗ ಕೊಡಿ ಎಂದು ಕೇಳಿದರೂ ಇನ್ನೂವರೆಗೂ ಜಾಗ ಕೊಟ್ಟಿಲ್ಲ. ಬೇರೆ ಕಡೆಯಿಂದ ರೈತರ ಮಾಲನ್ನು ಇಲ್ಲಿಗೆ ತರಿಸಿ ಹರಾಜು ಮಾಡುವುದಿಲ್ಲ. ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಬಂದಾಗ ಬೆಲೆಯಲ್ಲಿ ಏರಿಳಿತ ಸಹಜ ಎಂದು ವಿವರಿಸಿದರು.ರೈತರ ಪರವಾಗಿ ಮಾತನಾಡಿದ  ಢವಳಗಿಯ ರೈತ ಮುಖಂಡ ವೆಂಕಪ್ಪಣ್ಣ ಕೊಣ್ಣುರ ಅವರು ಮಾತನಾಡಿ, ತರಕಾರಿ ಮಾರುಕಟ್ಟೆಯಲ್ಲಿ ರೈತರ ಶೋಷಣೆ ನಡೆಯುತ್ತಿರುವುದು ನಿಜ. ಹೊರಗಡೆಯ ಮಾಲನ್ನು ತಂದು   ಇಲ್ಲಿ ಹರಾಜು ಮಾಡುವ ಮೂಲಕ ಇಲ್ಲಿನ ರೈತರ ಮಾಲಿಗೆ ಬೆಲೆ ಕಡಿಮೆಯಾಗುವಂತೆ ಮಾಡಲಾಗುತ್ತಿದೆ. ರೈತರು ಮಾಲು ತುಂಬಿಕೊಂಡು ತಂದ ಬುಟ್ಟಿಗಳನ್ನು ಹರಾಜು ನಂತರ        ಸ್ಥಳದಲ್ಲಿಯೇ ಖಾಲಿ ಮಾಡಿ ಅವರ ಬುಟ್ಟಿ ಮರಳಿಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.ರಮೇಶ ಕರಡ್ಡಿ ಮಾತನಾಡಿ, ಮಾರುಕಟ್ಟೆಯಲ್ಲಿ ರೈತರಿಗೆ ಶೋಷಣೆ ನಡೆಯುತ್ತಿಲ್ಲ ಎಂದು ಹೇಳಿದರು.

ಕೆಲವರು ದಲ್ಲಾಳಿ ಗಳ ಪರವಾಗಿ ಮಾತ ನಾಡಿದರೆ ಇನ್ನೂ ಕೆಲವರು ರೈತರ ಪರ ವಾಗಿ ಮಾತ ನಾಡಿದರು ಎಂದರು. ಇದರಿಂದಾಗಿ ಮುಂಜಾನೆ ಹರಾಜು ಸಮಯದಲ್ಲಿ ಗೊಂದಲ ಉಂಟಾಗಿ ಬಹು ಸಮಯದವರೆಗೆ ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿತ್ತು.ತಾಜಾ ತರಕಾರಿ ಮಾರಲು ಬಂದಿದ್ದ ರೈತರು ದಲ್ಲಾಳಿಗಳ ಸ್ಪಷ್ಟನೆ ಮುಗಿಯುವವರೆಗೂ ತಲೆ ಮೇಲೆ ಕೈಹೊತ್ತು ಕುಳಿತರು. ನಂತರ ರೈತರ ಒತ್ತಾಯದ ಮೇರೆಗೆ ಹರಾಜು ಕಾರ‌್ಯವನ್ನು ಪ್ರಾರಂಭಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.