ಮುಗ್ಗರಿಸಿ ಬಿದ್ದ ಗಿಲ್ಲಾರ್ಡ್...

7

ಮುಗ್ಗರಿಸಿ ಬಿದ್ದ ಗಿಲ್ಲಾರ್ಡ್...

Published:
Updated:
ಮುಗ್ಗರಿಸಿ ಬಿದ್ದ ಗಿಲ್ಲಾರ್ಡ್...

ನವದೆಹಲಿ (ಪಿಟಿಐ): ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ರಾಜ್‌ಘಾಟ್‌ನಲ್ಲಿ ರಾಷ್ಟ್ರಪಿತನ ಸಮಾಧಿ ಸ್ಥಳಕ್ಕೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿ ಹಿಂತಿರುಗುವಾಗ ಅವರ ಹೈಹೀಲ್ಡ್ ಶೂ ಹುಲ್ಲಿನಲ್ಲಿ ಸಿಕ್ಕಿಹಾಕಿಕೊಂಡು ಮುಗ್ಗರಿಸಿದ ಘಟನೆ ನಡೆದಿದೆ.ಈ ಘಟನೆಯನ್ನು ತಮಾಷೆಯಾಗಿ ತೆಗೆದುಕೊಂಡ ಗಿಲ್ಲಾರ್ಡ್ `ನನ್ನ ಚಪ್ಪಲಿ ಹುಲ್ಲಿನಲ್ಲಿ ಸಿಕ್ಕಿಹಾಕಿಕೊಂಡಿತು. ಮಹಿಳೆಯರಿಗೆ ಇದೂ ಯಾವಾಗಲೂ ಒಂದು ತೊಂದರೆ. ಪುರುಷರಿಗೆ ಈ ಸಮಸ್ಯೆ ಇಲ್ಲ~ ಎಂದು ನಗುತ್ತಲೇ ಹೇಳಿದರು.ಈ ಹಿಂದೆ 2 ಬಾರಿ ಗಿಲ್ಲಾರ್ಡ್ ಆಸ್ಟ್ರೇಲಿಯಾದಲ್ಲಿ ಚಪ್ಪಲಿ ಕಳೆದುಕೊಂಡಿದ್ದರು. ಜನವರಿಯಲ್ಲಿ ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾ ದಿನಾಚರಣೆ ಸಂದರ್ಭದದಲ್ಲಿ  ನಡೆದ ಗಲಭೆಯಲ್ಲಿ ಮತ್ತು ಚುನಾವಣೆ ಪ್ರಚಾರದ ವೇಳೆ ಅವರು ಚಪ್ಪಲಿ ಕಳೆದುಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry