ಮುಚ್ಚಿಹೋಗಿದ್ದ ಸರೋವರ ಕೊರೆದ ವಿಜ್ಞಾನಿಗಳು

7

ಮುಚ್ಚಿಹೋಗಿದ್ದ ಸರೋವರ ಕೊರೆದ ವಿಜ್ಞಾನಿಗಳು

Published:
Updated:

ಮಾಸ್ಕೊ (ಪಿಟಿಐ): ಲಕ್ಷಾಂತರ ವರ್ಷಗಳಷ್ಟು ಹಿಂದೆ ಮಂಜುಗಡ್ಡೆಯ ಅಡಿಯಲ್ಲಿ ಹುದುಗಿಹೋಗಿದ್ದ ಅಂಟಾರ್ಕ್‌ಟಿಕ ಸರೋವರವನ್ನು ಕೊರೆಯುವಲ್ಲಿ ಯಶಸ್ವಿಯಾಗಿರುವುದಾಗಿ ರಷ್ಯದ ವಿಜ್ಞಾನಿಗಳು ಹೇಳಿದ್ದಾರೆ.ಅಂಟಾರ್ಕ್‌ಟಿಕ ವ್ಯಾಪ್ತಿಯ ವೋಸ್ಟೋಕ್ ಸರೋವರದೊಳಗೆ ಸುಮಾರು ನಾಲ್ಕು ಕಿ.ಮೀಗಳಷ್ಟು ಆಳವನ್ನು ವಿಜ್ಞಾನಿಗಳು ಕೊರೆದಿದ್ದು, ಇದರಿಂದ ಮಹತ್ತರವಾದ ಅಂಶಗಳು ಬೆಳಕಿಗೆ ಬರಲಿವೆ ಎಂದು ರಷ್ಯ ಸುದ್ದಿಸಂಸ್ಥೆ `ರಿಯಾ ನೊವೋಸ್ತಿ~ ವರದಿ ಮಾಡಿದೆ. ಸರೋವರದ ಆಳದಿಂದ ಸಂಗ್ರಹಿಸಲಾದ ನೀರಿನ ಮಾದರಿಯನ್ನು ಪರಿಣತರು ಪರೀಕ್ಷೆ ನಡೆಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry