ಮಂಗಳವಾರ, ಜೂನ್ 22, 2021
22 °C
ಬಿಎಂಟಿಸಿ ಚಾಲಕನ ಅನುಚಿತ ವರ್ತನೆ ಪ್ರಕರಣ

ಮುಚ್ಚಿ ಹಾಕಲು ಯತ್ನ:ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯುವತಿಯೊಂದಿಗೆ ಬಿಎಂಟಿಸಿ ಚಾಲಕ ಅನುಚಿತವಾಗಿ ವರ್ತಿಸಿದ ಪ್ರಕರಣವನ್ನು  ಮುಚ್ಚಿ­ಹಾಕಲು ರಾಜ್ಯ ಸರ್ಕಾರ ಯತ್ನಿ­ಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.‘ಪ್ರಕರಣ ನಡೆದು ಐದು ದಿನ­ಗಳಾ­ದರೂ ಗೃಹ ಸಚಿವರು ಹೇಳಿಕೆ ನೀಡಿಲ್ಲ. ನೊಂದ ಯುವತಿ­ಯನ್ನು ಮಾನ­ವೀಯ ದೃಷ್ಟಿಯಿಂದ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ’ ಎಂದು ವಿಧಾನ ಪರಿ­ಷತ್‌ ಸದಸ್ಯ ಅಶ್ವತ್ಥ­­ನಾರಾಯಣ್‌ ಮಂಗಳ­ವಾರ ದೂರಿದರು.‘ಗೃಹ ಸಚಿವರು ಅಥವಾ ಪೊಲೀಸ್‌ ಮುಖ್ಯಸ್ಥರು ಪ್ರಕರಣದ ಸತ್ಯಾಂಶ­ವನ್ನು ಜನರಿಗೆ ತಿಳಿಸಬೇಕು. ಪ್ರಕ­ರಣದ ತನಿಖೆ­ಯನ್ನು ಲೋಕಾ­ಯುಕ್ತಕ್ಕೆ ವಹಿಸ­ಬೇಕು. ಯುವತಿ­ಯನ್ನು ಭೇಟಿ ಮಾಡಲು ಮಾಧ್ಯಮ­ಗಳಿಗೆ ಅವಕಾಶ ಕೊಡಬೇಕು’  ಎಂದು  ಒತ್ತಾಯಿಸಿದರು.ವಿಧಾನ ಪರಿಷತ್‌ ಸದಸ್ಯೆ ತಾರಾ ಅನೂರಾಧ ಮಾತ­ನಾಡಿ, ‘ಹಲವು ಅಪರಾಧ ಪ್ರಕರಣ­ಗಳಲ್ಲಿ ಭಾಗಿ­ಯಾಗಿದ್ದ  ಚಾಲಕನ ವಿರುದ್ಧ ಮೊದಲೇ ಯಾಕೆ ಕ್ರಮ ಕೈಗೊ­ಳ್ಳ­ಲಿಲ್ಲ? ಕಂಠಪೂರ್ತಿ ಮದ್ಯ­ಪಾನ ಮಾಡಿದ್ದ ಚಾಲಕನಿಗೆ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸಲು ಅವ­ಕಾಶ ಕೊಟ್ಟಿದ್ದೇಕೆ?’ ಎಂದು ಪ್ರಶ್ನಿ­ಸಿ­­ದರು. ಬಿಜೆಪಿ ಸಹ ವಕ್ತಾರರಾದ ಮಾಳ­ವಿಕಾ ಅವಿನಾಶ್‌ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.