ಮುಜಾಫರ್‌ನಗರ ಶಾಂತ, ಕರ್ಫ್ಯೂ ಸಡಿಲ

7

ಮುಜಾಫರ್‌ನಗರ ಶಾಂತ, ಕರ್ಫ್ಯೂ ಸಡಿಲ

Published:
Updated:

ಲಖನೌ(ಐಎಎನ್‌ಎಸ್‌): ಕೋಮು­­ಗಲಭೆಯಿಂದ ನಲುಗಿದ್ದ ಮಜಾಫರ್‌­ನಗರ ಮತ್ತು ಸುತ್ತ­ಮುತ್ತಲ ಪ್ರದೇಶ  ಶಾಂತವಾ­ಗಿದ್ದು, ಶನಿವಾರ  ಬೆಳಿಗ್ಗೆ 7ರಿಂದ ಸಂಜೆ 7 ಗಂಟೆ ವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು ಎಂದು ಅಧಿಕಾ­ರಿಗಳು ತಿಳಿಸಿದ್ದಾರೆ. ಇನ್ನೂ ಬಿಗುವಿನ ವಾತಾವ­ರಣದಿಂದ ಕೂಡಿರುವ ಗ್ರಾಮೀಣ ಭಾಗಗದ ಕೆಲ­ವೆಡೆ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿ­ಸಿವೆ. ಶುಕ್ರವಾರ ಕೂಡ 12 ತಾಸುಗಳ ಕಾಲ ಕರ್ಫ್ಯೂ ಸಡಿಲಿಸಲಾಗಿತ್ತು.40 ಸಾವಿರ ಜನರು ನಿರಾಶ­್ರಿತರಾಗಿ­ದ್ದಾರೆ. ನಿರಾಶ್ರಿತರಿಗೆ ಮುಜಾಫರ್‌ನಗರ ಮತ್ತು ಶಾಮ್ಲಿ ಜಿಲ್ಲೆಗಳಲ್ಲಿ ತೆರೆದಿರುವ 30 ಪರಿಹಾರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry