ಮುತಾಲಿಕ್ ನ್ಯಾಯಾಲಯಕ್ಕೆ ಹಾಜರು

7

ಮುತಾಲಿಕ್ ನ್ಯಾಯಾಲಯಕ್ಕೆ ಹಾಜರು

Published:
Updated:

ದಾವಣಗೆರೆ: ಪ್ರಚೋದನಕಾರಿ ಕರಪತ್ರ ಹಂಚಿದ ಆರೋಪದ ಮೇರೆಗೆ ವಿಚಾರಣೆಗಾಗಿ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಮತ್ತು ಸಂಘಟನೆಯ ಇತರರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾದರು.2009ರ ಜ. 12ರಂದು ಸೇನೆಯ ರಾಷ್ಟ್ರರಕ್ಷಾ ಸೇನೆ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಕರಪತ್ರ ಹಂಚಿದ ಆರೋಪ ಅವರ ಮೇಲಿತ್ತು. ನ್ಯಾಯಾಲಯ ವಿಚಾರಣೆಯನ್ನು ಫೆ. 21ಕ್ಕೆ ಮುಂದೂಡಿದೆ.ಇಂದಿನ ವಿಚಾರಣೆಯಲ್ಲಿ ಸಾಕ್ಷಿಗಳಾದ ಸೋಮಶೇಖರ್, ಸಂದೀಪ್, ಪ್ರಜ್ವಲ್, ಸುರೇಶ್ ಅವರು ಘಟನೆಗೆ ಸಂಬಂಧಿಸಿದಂತೆ ಪ್ರತಿಕೂಲ ಹೆಳಿಕೆ ನೀಡಿದ್ದಾರೆ. ಇದರಿಂದ ತಮ್ಮ ಕಾನೂನು ಹೋರಾಟಕ್ಕೆ ಬಲ ಬಂದಿದೆ. ಇನ್ನೊಬ್ಬ ಸಾಕ್ಷಿ ರಾಜು ಎಂಬುವರು ಹಾಜರಾಗಲು ವಾರಂಟ್ ಹೊರಡಿಸಲಾಗಿದೆ. ಸರ್ಕಾರದ ಪರ ಸಾಕ್ಷಿಗಳಾದ ದಾದಾಪೀರ್, ಜೋಸೆಫ್, ಪಿಎಸ್‌ಐ ಗುರುರಾಜ್ ಅವರಿಗೆ ಹಾಜರಾಗಲು ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ ಎಂದು ಮುತಾಲಿಕ್ ಪರ ವಕೀಲರಾದ ರೇವಣ್ಣ ಬಳ್ಳಾರಿ ‘ಪ್ರಜಾವಾಣಿ’ಗೆ ತಿಳಿಸಿದರು.ವಿಚಾರಣೆ ಮುಗಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುತಾಲಿಕ್, ಮುಖ್ಯಮಂತ್ರಿಯವರು ತಮಗೆ ಜೀವ ಬೆದರಿಕೆ ಇದೆ ಎಂದು ಹೇಳಿರುವುದನ್ನು ಖಂಡಿಸಿದರು.ಮುಖ್ಯಮಂತ್ರಿಯೇ ಹೀಗೆ ಹೇಳಬೇಕಾದರೆ ನಾಡಿನ 6 ಕೋಟಿ ಜನರ ಜೀವದ ರಕ್ಷಣೆಯ ಗತಿಯೇನು ಎಂದು ಪ್ರಶ್ನಿಸಿದರು.ನ್ಯಾ. ಸೋಮಶೇಖರ ಆಯೋಗದ ವರದಿಯನ್ನು ಸ್ವಾಗತಿಸಿದ ಅವರು, ಹಿಂದೂ ಸಂಘಟನೆಗಳಿಂದ ಮತ್ತೆ ಇತರ ಕೋಮುಗಳ ಮೇಲೆ ಹಲ್ಲೆಯಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಅವರು ಮತಾಂತರ ನಿಲ್ಲಿಸಲಿ.ನಾವೇನೂ ಅಂತಹ ಕೃತ್ಯಕ್ಕೆ ಇಳಿಯುವುದಿಲ್ಲ ಎಂದು ತಿಳಿಸಿದರು.ಮುತಾಲಿಕ್ ಜತೆ ಇತರ ಆರೋಪಿಗಳಾದ ಮಣಿಕಂಠ, ರಾಘವೇಂದ್ರ ಕಠಾರೆ, ಪರಶುರಾಮ್, ಜ್ಞಾನಪ್ರಕಾಶ್ ಇದ್ದರು.ಜೆಸಿಬಿ ಮಾಲೀಕರಿಗೆ ದಂಡಮರಳುಗಾರಿಕೆಯಲ್ಲಿ ತೊಡಗಿದ್ದ ಜೆಸಿಬಿ ಮಾಲೀಕರಿಗೆ ದಂಡ ವಿಧಿಸಿದ ಘಟನೆ ಹರಿಹರದಲ್ಲಿ ಮಂಗಳವಾರ ನಡೆದಿದೆ.ರಾಜನಹಳ್ಳಿ ಬಳಿ ಮರಳುಗಾರಿಕೆಗಾಗಿ ನಿಲ್ಲಿಸಿದ್ದ ಜೆಸಿಬಿಯನ್ನು ಹರಿಹರ ಪೊಲೀಸರು ರಾತ್ರಿ ಪತ್ತೆಹಚ್ಚಿ `ರೂ.1 ಸಾವಿರ ದಂಡ ವಿಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry