ಮುತಾಲಿಕ್ ಹೇಳಿಕೆಗೆ ಖಂಡನೆ

ಮಂಗಳವಾರ, ಜೂಲೈ 23, 2019
24 °C

ಮುತಾಲಿಕ್ ಹೇಳಿಕೆಗೆ ಖಂಡನೆ

Published:
Updated:

ಗುಲ್ಬರ್ಗ: ಟಿಪ್ಪು ಸುಲ್ತಾನ್ ಜನ್ಮ ದಿನದಂದು ಸರ್ಕಾರ ರಜೆ ಘೋಷಣೆ ಮಾಡಿದರೆ ರಾಜ್ಯದಲ್ಲಿ ಉಗ್ರವಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿಕೆ ನೀಡಿರುವ ಪ್ರಮೋದ ಮುತಾಲಿಕ್ ನೀಡಿರುವ ಹೇಳಿಕೆಯನ್ನು ಜೇವರ್ಗಿ ತಾಲ್ಲೂಕಿನ ಮಳ್ಳಿ ಗ್ರಾಮದ ಮೈಸೂರ ಹುಲಿ ಟಿಪ್ಪು ಸುಲ್ತಾನ ಯುವಕ ಸಂಘ ಖಂಡಿಸಿದೆ.ಮುತಾಲಿಕ್ ತಾವು ತೊಡುವ ರೇಷ್ಮೆ ಬಟ್ಟೆ ಟಿಪ್ಪು ಸುಲ್ತಾನ್ ಅವರ ಕೊಡುಗೆ ಎಂಬುದು ಮರೆಯಬಾರದು.ಕೂಡಲೇ ಸರ್ಕಾರ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಿಕ್ಕರಂಗೇಗೌಡ ಕರವಿನಾಳ, ಸರ್ದಾರ್ ಖುರೇಷಿ ಬೆಂಗಳೂರು, ಉಸ್ಮಾನ್ ಸಾಬ ಸಿಪಾಯಿ, ಮಹೆಬೂಬ ಮಣಿಯಾರ, ಖಾಸಿಂ ಆಲಮೇಲ್ ಮತ್ತು ಎಸ್. ಮಳ್ಳಿ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry