ಮುತ್ತಪ್ಪ ರೈ ಹೇಳಿಕೆ ಹಿಂಪಡೆಯಲಿ

ಬುಧವಾರ, ಜೂಲೈ 24, 2019
27 °C

ಮುತ್ತಪ್ಪ ರೈ ಹೇಳಿಕೆ ಹಿಂಪಡೆಯಲಿ

Published:
Updated:

ಕನಕಪುರ: ಮೂಢನಂಬಿಕೆಯ ಆಚರಣೆ ಎನಿಸಿರುವ ಮಡೆ ಮಡೆಸ್ನಾನದಂತಹ ಅನಿಷ್ಟ ಪದ್ಧತಿಯ ಪರವಾಗಿ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಅವರು ತಮ್ಮ ಈ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ಪ್ರಜಾ ವಿಮೊಚನಾ ಚಳವಳಿಯ (ಮಾನವತಾವಾದ) ರಾಜ್ಯ ಘಟಕದ ಅಧ್ಯಕ್ಷ ಛಲಪತಿ ನಾಗರಾಜು ಆಗ್ರಹಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಸಂಘಟನೆಯ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ ನಂತರ ಮಾತನಾಡಿದ ಅವರು, ಇದೊಂದು ದುರದುಷ್ಟಕರ ಸಂಗತಿ. ಮುತ್ತಪ್ಪ ರೈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ಘಟಕದ ಉಪಾಧ್ಯಕ್ಷ ಮುನಿಯಲ್ಲಪ್ಪ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಆಲೂರು ಪ್ರಕಾಶ್, ಕಾರ್ಯದರ್ಶಿ ತೂಬರಹಳ್ಳಿ ಸೋಮಸುಂದರ್, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಅತ್ತಿಬೆಲೆ ಪಿಳ್ಳಪ್ಪ, ಮಹೇಶ್, ನರಸಿಂಹಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಶಾಂತರಾಜು, ಉಪಾಧ್ಯಕ್ಷರಾದ ಅಮೀದ್ ಪಾಷ , ರವಿ, ಪ್ರಧಾನ ಕಾರ್ಯದರ್ಶಿ ಸತೀಶ್, ಕಾರ್ಯದರ್ಶಿ ಮಹದೇವ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಮೇಶ್, ತಾಲ್ಲೂಕು ಉಪಾಧ್ಯಕ್ಷ ಗುರು ಇತರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry