ಸೋಮವಾರ, ಜೂನ್ 21, 2021
22 °C

ಮುತ್ತಿನಂಥ ಕತೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಲ ಓದು

ಮರೆಯಲಾಗದ ಕತೆಗಳು

ಪ್ರ.ಸಂ: ಟಿ.ಪಿ. ಅಶೋಕ

ಬಿಡಿ ಪ್ರತಿ: ರೂ. 75

ಪ್ರ: ನುಡಿ ಪುಸ್ತಕ, 21ನೇ ಮುಖ್ಯರಸ್ತೆ, ಬಿಡಿಎ ಕಾಂಪ್ಲೆಕ್ಸ್ ಎದುರು, ಬನಶಂಕರಿ 2ನೇ ಹಂತ, ಬೆಂಗಳೂರು-70

ಬೆಂಗಳೂರಿನ `ನುಡಿ ಪ್ರಕಾಶನ~ ಕನ್ನಡದ ಅತ್ಯುತ್ತಮ ಕತೆಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ `ನುಡಿ ಮುತ್ತಿನ ಮಾಲೆ~ ಆರಂಭಿಸಿದ್ದು, `ಮರೆಯಲಾಗದ ಕತೆಗಳು~ ಶೀರ್ಷಿಕೆಯ ಮಾಲಿಕೆಯ ಮೊದಲ ಕಟ್ಟಿನಲ್ಲಿ ಹತ್ತು ಪುಸ್ತಕಗಳನ್ನು ಪ್ರಕಟಿಸಿದೆ.

 

“ಕನ್ನಡದ ಅತ್ಯುತ್ತಮ ಕತೆಗಳು ಕೇವಲ `ಕತೆ~ಗಳಾಗಿರದೆ ಕನ್ನಡದ ಸಾಂಸ್ಕೃತಿಕ ಚರಿತ್ರೆ, ಸಮಾಜಶಾಸ್ತ್ರ ಮತ್ತು ಮನೋವಿಜ್ಞಾನಗಳೂ ಆಗಿವೆ. ಕನ್ನಡದ ಕತೆಗಾರ ಕೇವಲ `ಕತೆ~ಗಳನ್ನು ಕಟ್ಟದೆ, ಅದಕ್ಕೂ ಮಿಗಿಲಾದ ವಾಂಙ್ಮಯವನ್ನೇ ಸೃಷ್ಟಿಸಿದ್ದಾನೆ. ಇಂಥ ಕತೆಗಾರರ ಆಯ್ದ ಕತೆಗಳ ಕಿರುಸಂಪುಟಗಳನ್ನು ಪ್ರಕಟಿಸುವುದು ಈ ಮಾಲಿಕೆಯ ಉದ್ದೇಶ”ವಾಗಿದೆ.ವಿಮರ್ಶಕ ಟಿ.ಪಿ. ಅಶೋಕ ಅವರು `ಮರೆಯಲಾಗದ ಕತೆಗಳು~ ಮಾಲಿಕೆಯ ಪ್ರಧಾನ ಸಂಪಾದಕರು. `ಹಿರಿಯ ಕತೆಗಾರರ ಕತೆಗಳು~, `ಕೊಡಗಿನ ಗೌರಮ್ಮ~ (6 ಕತೆ), `ತ್ರಿವೇಣಿ~ (8 ಕತೆ), `ಕೆ. ಸದಾಶಿವ~ (9 ಕತೆ), `ಎಂ ಎಸ್ ಕೆ ಪ್ರಭು~ (4 ನೀಳ್ಗತೆ), `ಬೆಸಗರಹಳ್ಳಿ ರಾಮಣ್ಣ~ (10 ಕತೆ), `ಜಿ.ಎಸ್. ಸದಾಶಿವ~ (11 ಕತೆ), `ಬಿ.ಸಿ. ದೇಸಾಯಿ~ (8 ಕತೆ), `ರಾಜಶೇಖರ ನೀರಮಾನ್ವಿ~ (5 ಕತೆ) ಹಾಗೂ `ಅಮರೇಶ ನುಗಡೋಣಿ~ (5 ಕತೆ) ಅವರ ಕತೆಗಳು ಮೊದಲ ಕಟ್ಟಿನಲ್ಲಿ ಪ್ರಕಟವಾದ ಪುಸ್ತಕಗಳಾಗಿವೆ.

 

ಈ ಪುಸ್ತಕಗಳನ್ನು ಕ್ರಮವಾಗಿ ಟಿ.ಪಿ. ಅಶೋಕ, ವೈದೇಹಿ, ಡಾ. ಬಿ.ಎನ್. ಸುಮಿತ್ರಾಬಾಯಿ, ಎಸ್.ಆರ್. ವಿಜಯಶಂಕರ, ಎ.ಎನ್. ಪ್ರಸನ್ನ, ಕೆ. ಸತ್ಯನಾರಾಯಣ, ಜೋಗಿ, ಕೇಶವ ಮಳಗಿ, ಮಲ್ಲಿಕಾರ್ಜುನ ಹಿರೇಮಠ ಹಾಗೂ ಶ್ರೀಧರ ಬಳಗಾರ ಸಂಪಾದಿಸಿದ್ದಾರೆ.`ಹಿರಿಯ ಕತೆಗಾರರ ಕತೆಗಳು~ ಪುಸ್ತಕದಲ್ಲಿ ಕೆರೂರ ವಾಸುದೇವಾಚಾರ್ಯ, ಪಂಜೆ ಮಂಗೇಶರಾಯ, ಕೊರಡ್ಕಲ್ ಶ್ರೀನಿವಾಸರಾವ್, ಸೇಡಿಯಾಪು ಕೃಷ್ಣಭಟ್ಟ, ಕಡೆಂಗೋಡ್ಲು ಶಂಕರಭಟ್ಟ, ಕೃಷ್ಣಕುಮಾರ ಕಲ್ಲೂರ, ಭಾರತೀಪ್ರಿಯ ಹಾಗೂ ದೇವುಡು ಅವರ ಒಂದೊಂದು ಕತೆಗಳಿವೆ.ಉಡುಗೊರೆ ಪೊಟ್ಟಣದ ರೂಪದಲ್ಲಿ ಹತ್ತು ಪುಸ್ತಕಗಳನ್ನು ಒಟ್ಟಾಗಿ ಕೊಳ್ಳಲಿಕ್ಕೆ ಸಾಧ್ಯವಿದೆ. ಬೆಲೆ: ರೂ. 750. ಬಿಡಿ ಪ್ರತಿಯ ಬೆಲೆ: ರೂ. 75. `ನುಡಿ ಪುಸ್ತಕ~ದ ಸಂಪರ್ಕ ಸಂಖ್ಯೆ: 080-26711329.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.