ಮಂಗಳವಾರ, ಜೂನ್ 22, 2021
28 °C

ಮುತ್ತೂಟ್ ಫೈನಾನ್ಸ್ ಎನ್‌ಸಿಡಿ ನೀಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಅತಿ ದೊಡ್ಡ ಚಿನ್ನದ ಹಣಕಾಸು ಸಂಸ್ಥೆಯಾಗಿರುವ ಮುತ್ತೂಟ್ ಫೈನಾನ್ಸ್, ಪರಿವರ್ತಿಸಲಾಗದ ಸಾಲ ಪತ್ರಗಳ  (ಎನ್‌ಸಿಡಿ) ನೀಡಿಕೆ ಆರಂಭಿಸಿದೆ.ಪ್ರತಿಯೊಂದು  ಸಾಲಪತ್ರದ ಮುಖ ಬೆಲೆ ರೂ 1000 ಆಗಿದ್ದು, ಕನಿಷ್ಠ  ಹೂಡಿಕೆ ರೂ 5000 ಇದೆ.  ರೂ 250 ಕೋಟಿಗಳನ್ನು ಸಂಗ್ರಹಿಸಲು ಸಂಸ್ಥೆ ಉದ್ದೇಶಿಸಿದೆ.ಹೂಡಿಕೆದಾರರಿಂದ ಹೆಚ್ಚಿನ ಉತ್ತೇಜನ ಕಂಡು ಬಂದರೆ ಸಂಗ್ರಹಿಸುವ ಮೊತ್ತವನ್ನು ರೂ 500 ಕೋಟಿಗಳಿಗೂ ಹೆಚ್ಚಿಸುವ ಸಾಧ್ಯತೆಗಳನ್ನು ಮುತ್ತೂಟ್ ಫೈನಾನ್ಸ್ ಸಂಸ್ಥೆ ಮುಕ್ತವಾಗಿ ಇಟ್ಟುಕೊಂಡಿದೆ.ಈ `ಎನ್‌ಸಿಡಿ~ ನೀಡಿಕೆಯಲ್ಲಿ ನಾಲ್ಕು ಹೂಡಿಕೆಯ ಆಯ್ಕೆಗಳಿದ್ದು,  ವಾರ್ಷಿಕ ಗರಿಷ್ಠ ಲಾಭ ಶೇ 13.43ರಷ್ಟಿದೆ ಎಂದು ಪ್ರಕಟಣೆ ತಿಳಿಸಿದೆ. ಈ ನೀಡಿಕೆಯು ಇದೇ 17ರಂದು ಕೊನೆಗೊಳ್ಳಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.