ಬುಧವಾರ, ಜೂನ್ 16, 2021
28 °C

ಮುದಿಗೆರೆ: ಶಾಂತಿಯುತ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ:  ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಮರಣ ಮತ್ತು ರಾಜೀನಾಮೆ ಕಾರಣದಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು.ಚನ್ನೇಶಪುರದಿಂದ ನೀಲಪ್ಪ, ಮೆದಿಕೆರೆ ದ್ರಾಕ್ಷಾಯಣಮ್ಮ, ಕರೇಕಟ್ಟೆ ಪಾರ್ವತಮ್ಮ, ಕಂಸಾಗರ ಗ್ರಾಮ ಪಂಚಾಯ್ತಿಗೆ ನೇತ್ರಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ಮುದಿಗೆರೆ ಗ್ರಾಮ ಪಂಚಾಯ್ತಿ ಒಂದು ಸ್ಥಾನಕ್ಕಾಗಿ ಚುನಾವಣೆ ನಡೆಯಿತು.ಬಿ.ಎಂ.ಗಿರೀಶ್‌ ಹಾಗೂ ಮಹೇಂದ್ರಪ್ಪ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು, 534 ಪುರುಷ ಹಾಗೂ 499 ಮಹಿಳೆಯರು ಸೇರಿ ಒಟ್ಟು 1,033 ಮತದಾರರು ಇದ್ದಾರೆ. ಇದರಲ್ಲಿ 941 ಮತದಾರರು ಮತ ಚಲಾಯಿಸಿದರು. ಶೇ 91ರಷ್ಟು  ಮತದಾನವಾಗಿದೆ.  ಅತಿ ಸೂಕ್ಷ್ಮ ಮತಗಟ್ಟೆಯಾಗಿದ್ದರಿಂದ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಮತ ಎಣಿಕೆ ಮಾರ್ಚ್‌ 5ರಂದು ಬೆಳಿಗ್ಗೆ 8ರಿಂದ ತಾಲ್ಲೂಕು ಕಚೇರಿಯಲ್ಲಿ ನಡೆಯಲಿದೆ ಎಂದು ತಹಶೀಲ್ದಾರ್‌ ಬಿ.ಒ. ನಾರಾಯಣ ಸ್ವಾಮಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.